Publish Date: Sat, 03 Oct 2020 (09:41 IST)
Updated Date: Sat, 03 Oct 2020 (09:42 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನ್ನಪ್ಪಿದ ಬಳಿಕ ಕೋಚ್ ಅನಿಲ್ ಕುಂಬ್ಳೆ ಮೇಲೆ ಹಲವರು ಕಿಡಿ ಕಾರಿದ್ದಾರೆ.
ಕರ್ನಾಟಕ ಆಟಗಾರರಿಗೆ ಹೆಚ್ಚು ಮಣೆ ನೀಡುತ್ತಿರುವುದಕ್ಕೆ ಟ್ವಿಟರಿಗರು ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಕಿಡಿ ಕಾರಿದ್ದಾರೆ. ಇದು ಪಂಜಾಬ್ ತಂಡವೇ ಅಥವಾ ಕರ್ನಾಟಕ ತಂಡವೇ? ಇಲ್ಲಿ ಪಂಜಾಬ್ ಮೂಲದ ಆಟಗಾರರಿಗೆ ಸ್ಥಾನವೇ ಇಲ್ಲ. ಕರ್ನಾಟಕದ ಆಟಗಾರರಿಗೆ ಮಣೆ ಹಾಕಲಾಗುತ್ತಿದೆ. ಸತತ ವೈಫಲ್ಯ ಹೊಂದಿದ ಹೊರತಾಗಿಯೂ ಕರುಣ್ ನಾಯರ್ ಗೆ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಆದರೆ ಸ್ಥಳೀಯ ಆಟಗಾರ ಮನ್ ದೀಪ್ ಸಿಂಗ್ ಗೆ ಅವಕಾಶವೇ ನೀಡುತ್ತಿಲ್ಲ ಎಂದು ಕುಂಬ್ಳೆ ಮತ್ತು ರಾಹುಲ್ ವಿರುದ್ಧ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.