Publish Date: Sat, 03 Oct 2020 (08:54 IST)
Updated Date: Sat, 03 Oct 2020 (08:56 IST)
ದುಬೈ: ಈ ಬಾರಿಯ ಐಪಿಎಲ್ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದುರಾದೃಷ್ಟ ಮುಂದುವರಿದಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ಗಳ ಸೋಲುಂಡಿದೆ.
ಇದರೊಂದಿಗೆ ಹ್ಯಾಟ್ರಿಕ್ ಸೋಲಿನ ಅವಮಾನಕ್ಕೀಡಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಮಧ್ಯಮ ಕ್ರಮಾಂಕದಲ್ಲಿ ಯುವ ಬ್ಯಾಟ್ಸ್ ಮನ್ ಪ್ರಿಯಂ ಗರ್ಗ್ ಅತ್ಯುತ್ತಮ ಆಟದ ನೆರವಿನಿಂದ (51 ನಾಟೌಟ್) ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈಗೆ ಹೈದರಾಬಾದ್ ಕರಾರುವಾಕ್ ಬೌಲಿಂಗ್ ಮೂಲಕ ಸೆಡ್ಡು ಹೊಡೆಯಿತು. ಅಗ್ರ ಪಂಕ್ತಿಯ ಬ್ಯಾಟ್ಸ್ ಮನ್ ಗಳು ಕೈಕೊಟ್ಟಾದ ನಾಯಕ ಧೋನಿ, ರವೀಂದ್ರ ಜಡೇಜಾ ಉತ್ತಮ ಆಟವಾಡಿದರು. ಧೋನಿ ಅಜೇಯ 47, ಜಡೇಜಾ 50 ರನ್ ಗಳಿಸಿದರು. ಆದರೆ ಇವರ ಆಟ ತಂಡಕ್ಕೆ ಗೆಲುವು ಕೊಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಚೆನ್ನೈ 5 ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಆದರೆ ಗೆಲುವು ಮಾತ್ರ ದಕ್ಕಲಿಲ್ಲ.