Select Your Language

Notifications

webdunia
webdunia
webdunia
webdunia

ಐಪಿಎಲ್ 13 ರ ಚಾಂಪಿಯನ್ ಶಿಪ್ ಯಾರ ಮುಡಿಗೆ? ಇಂದು ಫೈನಲ್ಸ್

ಐಪಿಎಲ್ 13 ರ ಚಾಂಪಿಯನ್ ಶಿಪ್ ಯಾರ ಮುಡಿಗೆ? ಇಂದು ಫೈನಲ್ಸ್
ದುಬೈ , ಮಂಗಳವಾರ, 10 ನವೆಂಬರ್ 2020 (09:12 IST)
ದುಬೈ: ಅಂತೂ ಇಂತೂ ಕೊರೋನಾ ನಡುವೆಯೂ ಐಪಿಎಲ್ 13 ಆಯೋಜನೆಯಾಗಿ ಇಂದು ಅಂತಿಮ ಹಂತಕ್ಕೆ ಬಂದಿದೆ. ಫೈನಲ್ಸ್ ನಲ್ಲಿ ಇಂದು ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ.


ರೋಹಿತ್ ಪಡೆ ಈಗಾಗಲೇ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಹೀಗಾಗಿ ಇಂದು ಗೆದ್ದರೆ ಮತ್ತೊಂದು ಇತಿಹಾಸವಾಗಲಿದೆ. ಇನ್ನೊಂದೆಡೆ ಶ್ರೇಯಸ್ ಐಯರ್ ನೇತೃತ್ವದ ಯುವ ಡೆಲ್ಲಿ ಪಡೆಗೆ ಇದು ಮೊದಲ ಐಪಿಎಲ್ ಫೈನಲ್ಸ್. ಒಂದು ವೇಳೆ ಡೆಲ್ಲಿ ಇಂದು ಗೆದ್ದರೆ ಶ್ರೇಯಸ್ ಐಯರ್ ಪಾಲಿಗೆ ಹೊಸ ಶಕೆ ಆರಂಭವಾಗಲಿದೆ. ನಾಯಕನಾಗಿ ಯುವ ಕ್ರಿಕೆಟಿಗ ಯಶಸ್ಸು ಕಂಡರೆ ಮುಂದೊಂದು ದಿನ ಟೀಂ ಇಂಡಿಯಾಕ್ಕೂ ಅವರು ನಾಯಕ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಲಿದ್ದಾರೆ. ಇಂದು ಯಾವುದೇ ತಂಡ ಗೆದ್ದರೂ ಅದೊಂದು ಇತಿಹಾಸವಾಗುವುದು ಖಂಡಿತಾ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸುವುದು ಆರ್ ಸಿಬಿಗೆ ಸುಲಭದ ಕೆಲಸವಲ್ಲ!