Publish Date: Sun, 27 Sep 2020 (08:52 IST)
Updated Date: Sun, 27 Sep 2020 (08:53 IST)
ದುಬೈ: ಐಪಿಎಲ್ 13 ರಲ್ಲಿ ಇಂದು ರಾಜರ ನಡುವೆ ಗುದ್ದಾಟ ನಡೆಯಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಇಂದಿನ ಪಂದ್ಯ ನಡೆಯಲಿದೆ.
ಈಗಾಗಲೇ ಕೆಎಲ್ ರಾಹುಲ್ ನಾಯಕತ್ವದಲ್ಲಿ ಹೊಸ ಹುರುಪಿನಲ್ಲಿರುವ ಪಂಜಾಬ್ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ರಾಜಸ್ಥಾನ್ ಗೆ ಹೋಲಿಸಿದರೆ ಮೇಲ್ನೋಟಕ್ಕೆ ಪಂಜಾಬ್ ಪ್ರಬಲವಾಗಿದೆ. ಹಾಗಿದ್ದರೂ ಸ್ಟೀವ್ ಸ್ಮಿತ್ ಪಡೆಯ ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಭಾನುವಾರದ ಸಂಜೆಗೆ ಒಳ್ಳೆ ರಸದೌತಣ ಗ್ಯಾರಂಟಿ. ಇಂದು ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.