Select Your Language

Notifications

webdunia
webdunia
webdunia
webdunia

ಐಪಿಎಲ್ 13: ದಾಖಲೆಯ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್

ಐಪಿಎಲ್ 13: ದಾಖಲೆಯ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್
ದುಬೈ , ಸೋಮವಾರ, 28 ಸೆಪ್ಟಂಬರ್ 2020 (09:08 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ದಾಖಲೆಯ 223 ರನ್ ಗಳ ರನ್ ಚೇಸ್ ಮಾಡಿ ಗೆದ್ದುಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್, ನಾಯಕ ಕೆಎಲ್ ರಾಹುಲ್-ಮಯಾಂಕ್ ಅಗರ್ವಾಲ್ ಭರ್ಜರಿ ಓಪನಿಂಗ್ ಜತೆಯಾಟದಿಂದಾಗಿ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ರಾಹುಲ್ 54 ಎಸೆತಗಳಲ್ಲಿ 69 ರನ್ ಗಳಿಸಿದರೆ ಮಯಾಂಕ್ 50 ಎಸೆತಗಳಲ್ಲಿ ಬರೋಬ್ಬರಿ 106 ರನ್ ಗಳಿಸಿದರು. ಈ ಬೃಹತ್ ಮೊತ್ತ ನೋಡಿ ಪಂಜಾಬ್ ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.

ಆದರೆ ಲೆಕ್ಕಾಚಾರ ಉಲ್ಟಾ ಮಾಡಿದ್ದ ರಾಜಸ್ಥಾನ್ ನಾಯಕ ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್ ಜೋಡಿ. ಸ್ಮಿತ್ 27 ಎಸೆತಗಳಿಗೆ 50 ರನ್ ಗಳಿಸಿ ಔಟಾದರೆ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 85 ರನ್ ಗಳಿಸಿದರು. ರಾಹುಲ್ ತೆವಾತಿಯ 31 ಎಸೆತಗಳಲ್ಲಿ 53  ರನ್ ಗಳಿಸಿ ಅಸಾಧ್ಯವೆನಿಸಿದ್ದ ಮೊತ್ತವನ್ನು ಸಾಧ‍್ಯವಾಗಿಸಿದರು. ರಾಜಸ್ಥಾನ್ 19.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸುವ ಮೂಲಕ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆ ಮಾಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ಪ್ರದರ್ಶನದ ಬೆನ್ನಲ್ಲೇ ಸಿಎಸ್ ಕೆಗೆ ಸುರೇಶ್ ರೈನಾ ಕಮ್ ಬ್ಯಾಕ್ ರೂಮರ್