Publish Date: Mon, 21 Sep 2020 (06:20 IST)
Updated Date: Mon, 21 Sep 2020 (06:21 IST)
ದುಬೈ: ಐಪಿಎಲ್ 13 ರ ಎರಡನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ನ್ನು ಸೂಪರ್ ಓವರ್ ನಲ್ಲಿ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಐಯರ್ ನೇತೃತ್ವದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಶಿಖರ್ ಧವನ್ ಶೂನ್ಯ ಸುತ್ತಿದರೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಐಯರ್ (39), ರಿಷಬ್ ಪಂತ್ (31), ಮಾರ್ಕಸ್ ಸ್ಟಾಯ್ನಿಸ್ (53) ತಂಡದ ಮೊತ್ತ ಉಬ್ಬಲು ನೆರವಾದರು.
ಇತ್ತ ಪಂಜಾಬ್ ಆರಂಭವೂ ಉತ್ತಮವಾಗಿರಲಿಲ್ಲ. ನಾಯಕ ಕೆಎಲ್ ರಾಹುಲ್ ಕೇವಲ 21 ರನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಮೇಲೊಂದರಂತೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ವೇಳೆ ಮಯಾಂಕ್ ಅಗರ್ವಾಲ್ ಭರ್ಜರಿ ಆಟವಾಡಿ 89 ರನ್ ಗಳಿಸಿ ಗೆಲುವಿನ ಆಸೆ ಮೂಡಿಸಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ. ಅಂತಿಮವಾಗಿ ಎರಡೂ ತಂಡಗಳ ಸ್ಕೋರ್ ಟೈ ಆದಾಗ ಸೂಪರ್ ಓವರ್ ಮಾಡಲಾಯಿತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 3 ರನ್ ಗಳ ಟಾರ್ಗೆಟ್ ನೀಡಿತು. ಆದರೆ ಪಂಜಾಬ್ 2 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ನಾಲ್ಕು ಎಸೆತ ಬಾಕಿಯಿರುವಾಗಲೇ ಸೋಲೊಪ್ಪಿಕೊಂಡಿತು.