ದುಬೈ: ಐಪಿಎಲ್ 13 ರಲ್ಲಿ ಆರ್ ಸಿಬಿ ಕರ್ನಾಟಕ ಮೂಲದ ತಂಡವಾದರೂ ಹೆಚ್ಚು ಕನ್ನಡಿಗರು ಇರುವುದು, ಕನ್ನಡಿಗರ ಪಾರಮ್ಯವಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ.
ಪಂಜಾಬ್ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ ಆದರೆ, ಕೋಚ್ ಅನಿಲ್ ಕುಂಬ್ಳೆ. ಇವರಲ್ಲದೆ, ಮಯಾಂಕ್ ಅಗರ್ವಾಲ್, ಕರುಣ್ ನಾಯಕರ್, ಗೌತಮ್ ಸೇರಿದಂತೆ ಕನ್ನಡಿಗರ ಪಡೆಯೇ ಪಂಜಾಬ್ ತಂಡದಲ್ಲಿದೆ. ಹೀಗಾಗಿ ಕನ್ನಡಿಗರ ಬೆಂಬಲ ಈ ತಂಡಕ್ಕೂ ಇದೆ. ಇಂದು ಮೊದಲ ಪಂದ್ಯವಾಡಲಿರುವ ಪಂಜಾಬ್ ಗೆ ಡೆಲ್ಲಿ ಎದುರಾಳಿಯಾಗಿದೆ.