Publish Date: Tue, 13 Oct 2020 (09:49 IST)
Updated Date: Tue, 13 Oct 2020 (09:50 IST)
ದುಬೈ: ಐಪಿಎಲ್ 13 ರಲ್ಲಿ ಟೀಂ ಇಂಡಿಯಾಕ್ಕೆ ಭವಿಷ್ಯದಲ್ಲಿ ನೆರವಾಗಬಲ್ಲ ಹೊಸ ಹೊಸ ಪ್ರತಿಭೆಗಳ ಅನಾವರಣವಾಗಿದೆ. ಇದುವರೆಗಿನ ಪಂದ್ಯಗಳಲ್ಲಿ ಸ್ಟಾರ್ ಆಟಗಾರರಿಗಿಂತ ಗಮನ ಸೆಳೆದಿರುವುದು ಯುವ ಪ್ರತಿಭೆಗಳೇ.
ರಾಜಸ್ಥಾನ್ ತಂಡದ ರಾಹುಲ್ ತೆವಾತಿಯಾ, ಯಶಸ್ವಿ ಜೈಸ್ವಾಲ್, ಆರ್ ಸಿಬಿ ತಂಡದ ದೇವದತ್ತ್ ಪಡಿಕ್ಕಲ್, ಮುಂಬೈ ತಂಡದ ಸೂರ್ಯಕುಮಾರ್ ಯಾದವ್, ಕೆಕೆಆರ್ ತಂಡದ ಶಬ್ನಂ ಗಿಲ್, ಪ್ರಸಿದ್ಧ್ ಕೃಷ್ಣ, ಕಿಂಗ್ಸ್ ಇಲೆವೆನ್ ಪಂಜಾಬ್ ನ ರವಿ ಬಿಷ್ಣೋಯ್, ಹೈದರಾಬಾದ್ ತಂಡದ ಪ್ರಿಯಂ ಗರ್ಗ್ ಮುಂತಾದ ಯುವ ಪ್ರತಿಭೆಗಳು ಈಗಾಗಲೇ ತಮ್ಮ ತಂಡದ ಪರ ಗಮನಾರ್ಹ ಪ್ರದರ್ಶನ ನೀಡುತ್ತಿದ್ದು, ಮುಂದೊಂದು ದಿನ ಟೀಂ ಇಂಡಿಯಾ ಪ್ರತಿನಿಧಿಸುವ ಲಕ್ಷಣ ತೋರಿದ್ದಾರೆ. ಆ ನಿಟ್ಟಿನಲ್ಲಿ ಐಪಿಎಲ್ ಯುವ ಆಟಗಾರರಿಗೆ ವೇದಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕೋಚ್, ಸಹ ಕ್ರಿಕೆಟಿಗರ ಮಾರ್ಗದರ್ಶನ, ಪಂದ್ಯಗಳ ಅನುಭವ ಸಿಗುವುದರಿಂದ ಈ ಯುವ ಪ್ರತಿಭೆಗಳು ಮತ್ತಷ್ಟು ಉತ್ತಮ ಆಟಗಾರರಾಗಿ ರೂಪುಗೊಳ್ಳುತ್ತಿದ್ದಾರೆ. ಇದು ಟೀಂ ಇಂಡಿಯಾಕ್ಕೆ ಉತ್ತಮ ಭವಿಷ್ಯ ನೀಡಬಹುದು.