Publish Date: Tue, 13 Oct 2020 (09:05 IST)
Updated Date: Tue, 13 Oct 2020 (09:15 IST)
ದುಬೈ: ಐಪಿಎಲ್ 13 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ದಿಗ್ವಿಜಯ ಸಾಧಿಸಿದೆ. ಕೆಕೆಆರ್ ವಿರುದ್ಧ ಭರ್ಜರಿ 82 ರನ್ ಗಳ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ದೇವದತ್ತ್ ಪಡಿಕ್ಕಲ್, ಏರಾನ್ ಫಿಂಚ್ ಉತ್ತಮಆರಂಭ ಒದಗಿಸಿದರು. ಇವರು ಹಾಕಿಕೊಟ್ಟ ಅಡಿಪಾಯವನ್ನು ಮುಂದುವರಿಸಿಕೊಂಡು ಹೋದ ವಿರಾಟ್ ಕೊಹ್ಲಿ-ಎಬಿಡಿ ವಿಲಿಯರ್ಸ್ ಜೋಡಿ ಆರ್ ಸಿಬಿಗೆ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 194 ರನ್ ಗಳ ಬೃಹತ್ ಮೊತ್ತ ನೀಡಿದರು. ಇವರಲ್ಲಿ ಕೊಹ್ಲಿ ಸಾಥಿಯ ಪಾತ್ರ ನಿಬಾಯಿಸಿ 28 ಎಸೆತಗಳಲ್ಲಿ 33 ರನ್ ಗಳಿಸಿದರೆ ಎಬಿಡಿ ವಿಲಿಯರ್ಸ್ ಹೊಡೆಬಡಿಯ ಆಟವಾಡಿ ಕೇವಲ 33 ಎಸೆತಗಳಿಂದ 73 ರನ್ ಸಿಡಿಸಿದರು.
ಈ ಮೊತ್ತ ಬೆನ್ನತ್ತಿದ ಕೆಕೆಆರ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು. ಶಬ್ನಂ ಗಿಲ್ 34 ರನ್ ಗಳಿಸಿ ಔಟಾಗುತ್ತಿದ್ದಂತೇ ಕೆಕೆಆರ್ ಶರಣಾಗತಿ ಆರಂಭವಾಯಿತು. ಅಂತಿಮವಾಗಿ ಕೆಕೆಆರ್ 20 ಓವರ್ ಗಳಲ್ಲಿ ಕೇವಲ 112 ರನ್ ಗಳಿಗೆ ಆಲೌಟ್ ಆಯಿತು.