Select Your Language

Notifications

webdunia
webdunia
webdunia
webdunia

ಐಪಿಎಲ್ 13 ಬಳಿಕ ಧೋನಿ ಈ ವಿದೇಶದ ಫ್ರಾಂಚೈಸಿ ಪಾಲು?!

ಐಪಿಎಲ್ 13 ಬಳಿಕ ಧೋನಿ ಈ ವಿದೇಶದ ಫ್ರಾಂಚೈಸಿ ಪಾಲು?!
ದುಬೈ , ಶುಕ್ರವಾರ, 23 ಅಕ್ಟೋಬರ್ 2020 (12:05 IST)
ದುಬೈ: ಐಪಿಎಲ್ 13 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಪ್ರದರ್ಶನ ನೀಡಿದರೂ ನಾಯಕ ಧೋನಿ ಬಗ್ಗೆ ಕ್ರೇಜ್ ಕಡಿಮೆಯಾಗಿಲ್ಲ.


ಅಂತಾರಾಷ್ಟ್ರೀಯ ತಂಡಕ್ಕೆ ವಿದಾಯ ಘೋಷಿಸಿರುವ ಧೋನಿಯನ್ನು ಈಗ ವಿದೇಶೀ ಲೀಗ್ ಗಳು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಮೂಲಗಳ ಪ್ರಕಾರ ಐಪಿಎಲ್ ಮುಗಿದ ಬಳಿಕ ಧೋನಿ ಬಿಗ್ ಬ್ಯಾಶ್ ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಂಡರೂ ಅಚ್ಚರಿಯಿಲ್ಲ. ಈಗಾಗಲೇ ಬಿಬಿಎಲ್ ಟೂರ್ನಿಯಲ್ಲಿ ವಿದೇಶೀ ಆಟಗಾರರ ಮಿತಿಯನ್ನು ಎರಡರಿಂದ ಮೂರಕ್ಕೇರಿಸಲಾಗಿದೆ. ಹೀಗಾಗಿ ಬಿಬಿಎಲ್ ಫ್ರಾಂಚೈಸಿಗಳು ಧೋನಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ ಎನ್ನಲಾಗಿದೆ. ಆದರೆ ಧೋನಿ ವಿದೇಶೀ ಲೀಗ್ ನ ಭಾಗವಾಗುತ್ತಾರೋ ಅಥವಾ ಐಪಿಎಲ್ ಗೆ ಮಾತ್ರ ಸೀಮಿತವಾಗುತ್ತಾರೋ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ನೋಡ್ತಿದ್ರೆ ಶಾಲಾ ದಿನ ನೆನಪಾಗುತ್ತೆ ಎಂದ ವಿರಾಟ್ ಕೊಹ್ಲಿ