Select Your Language

Notifications

webdunia
webdunia
webdunia
webdunia

ಐಪಿಎಲ್: ಸಿಎಸ್ ಕೆ ನಾಯಕ ಧೋನಿಗೆ ದಂಡದ ಶಿಕ್ಷೆ

ಐಪಿಎಲ್: ಸಿಎಸ್ ಕೆ ನಾಯಕ ಧೋನಿಗೆ ದಂಡದ ಶಿಕ್ಷೆ
ಜೈಪುರ , ಶನಿವಾರ, 13 ಏಪ್ರಿಲ್ 2019 (08:45 IST)
ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅಂಪಾಯರ್ ವಿರುದ್ಧ ವಾಗ್ವಾದಕ್ಕಿಳಿದ ತಪ್ಪಿಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ದಂಡ ವಿಧಿಸಲಾಗಿದೆ.


ಸಾಮಾನ್ಯವಾಗಿ ಧೋನಿ ಈ ರೀತಿ ಮೈದಾನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ದಂಡ ಹಾಕಿಸಿಕೊಂಡಿದ ಉದಾಹರಣೆಯೇ ಇಲ್ಲ. ಆದರೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ನೋ ಬಾಲ್ ಒಮ್ಮೆ ನೀಡಿ ನಂತರ ಇಲ್ಲ ಎಂದು ಎಡವಟ್ಟು ಮಾಡಿದ ಅಂಪಾಯರ್ ವಿರುದ್ಧ ಮೈದಾನ ಪ್ರವೇಶಿಸಿ ವಾಗ್ವಾದಕ್ಕಿಳಿದಿದ್ದರು.

ಇದೇ ಕಾರಣಕ್ಕೆ ಧೋನಿಗೆ ಪಂದ್ಯದ ಸಂಭಾವನೆಯ ಶೇ.50 ರಷ್ಟು ದಂಡ ವಿಧಿಸಲಾಗಿದೆ. ಸಿಎಸ್ ಕೆ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿತ್ತು. ಧೋನಿ ಪೆವಿಲಿಯನ್ ನಿಂದ ಮೈದಾನಕ್ಕೆ ನುಗ್ಗಿ ಅಂಪಾಯರ್ ಜತೆ ವಾಗ್ವಾದ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ಯಾಪ್ಟನ್ ಧೋನಿ