Publish Date: Fri, 12 Apr 2019 (07:42 IST)
Updated Date: Fri, 12 Apr 2019 (07:43 IST)
ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕಿಂಗ್ಸ್ ಐಪಿಲ್ ಪಂದ್ಯವಾಡುವಾಗ ಗಾಯಗೊಂಡಿರುವುದು ಟೀಂ ಇಂಡಿಯಾದ ವಿಶ್ವಕಪ್ ಕನಸಿಗೂ ಶಾಕ್ ಕೊಟ್ಟಂತಾಗಿದೆ.
ರೋಹಿತ್ ಶೀಘ್ರದಲ್ಲೇ ಗುಣಮುಖರಾಗುವುದು ಟೀಂ ಇಂಡಿಯಾ ಪಾಲಿಗೂ ಮುಖ್ಯವಾಗಿದೆ. ಇದೇ ಕಾರಣಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ಆಡಿರಲಿಲ್ಲ. ಹೀಗಾಗಿ ರೋಹಿತ್ ಗಾಯ ಗಂಭೀರವಾಗಿರಬಹುದೇ ಎಂದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.
ಈ ಬಗ್ಗೆ ಇದೀಗ ಮುಂಬೈ ಆಟಗಾರ ಪೊಲ್ಲಾರ್ಡ್ ರೋಹಿತ್ ಸ್ಥಿತಿ ಗತಿ ಬಗ್ಗೆ ವಿವರಣೆ ನೀಡಿದ್ದು, ಮುಂದಿನ ಪಂದ್ಯಕ್ಕೆ ರೋಹಿತ್ ಲಭ್ಯರಾಗುತ್ತಾರೆ. ವಿಶ್ರಾಂತಿ ನೀಡುವ ಉದ್ದೇಶದಿಂದ ಅವರು ಈ ಪಂದ್ಯದಲ್ಲಿ ಹೊರಗಿಡಲಾಯಿತು ಎಂದಿದ್ದಾರೆ. ಈ ಮೂಲಕ ರೋಹಿತ್ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ