Select Your Language

Notifications

webdunia
webdunia
webdunia
Friday, 11 April 2025
webdunia

ಸರಿಯಾದ ಸಮಯದಲ್ಲೇ ಫಾರ್ಮ್ ಗೆ ಬಂದು ಟೀಂ ಇಂಡಿಯಾ ಆಯ್ಕೆಗಾರರಿಗೆ ಸಂದೇಶ ಕೊಟ್ಟ ಕೆಎಲ್ ರಾಹುಲ್

ಕೆಎಲ್ ರಾಹುಲ್
ಮುಂಬೈ , ಶುಕ್ರವಾರ, 12 ಏಪ್ರಿಲ್ 2019 (07:36 IST)
ಮುಂಬೈ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಕಳೆದ ಕೆಲವು ಸಮಯದಿಂದ ಫಾರ್ಮ್ ನಲ್ಲಿಲ್ಲದೆ ಭಾರೀ ಟೀಕೆಗೊಳಗಾಗಿದ್ದರು. ರಾಹುಲ್ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದೂ ಕೆಲವರು ಒತ್ತಾಯಿಸುತ್ತಿದ್ದರು.


ಆದರೆ ಇದೀಗ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಗೆ ಮರಳಿರುವ ರಾಹುಲ್, ಒಂದು ಶತಕವನ್ನೂ ಸಿಡಿಸಿ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ವಿಶ್ವಕಪ್ ಗೆ ಆಯ್ಕೆಯಾಗಲಿರುವ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಜಿಜ್ಞಾಸೆ ಆಯ್ಕೆಗಾರರಲ್ಲಿದೆ. ಆದರೆ ಇದೀಗ ರಾಹುಲ್ ಫಾರ್ಮ್ ಗೆ ಮರಳಿರುವುದರಿಂದ ಅವರನ್ನೇ ಆರಿಸುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಪೊಲ್ಲಾರ್ಡ್ ಪವರ್ ಮುಂದೆ ಜೀರೋ ಆದ ಕೆಎಲ್ ರಾಹುಲ್ ಸೆಂಚುರಿ