Publish Date: Wed, 29 Nov 2017 (10:17 IST)
Updated Date: Wed, 29 Nov 2017 (10:20 IST)
ನವದೆಹಲಿ: ಇತ್ತೀಚೆಗಷ್ಟೇ ಪಾಕ್ ಗೃಹಬಂಧನದಿಂದ ಮುಕ್ತಗೊಳಿಸಿದ ಉಗ್ರ ಹಫೀಜ್ ಸಯೀದ್ ಬಗ್ಗೆ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತಮ್ಮ ಕುರುಡು ಪ್ರೇಮ ವ್ಯಕ್ತಪಡಿಸಿದ್ದಾರೆ.
ನಾನು ಆತನನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಆತನ ಮೇಲೆ ನನಗೆ ಪ್ರೀತಿಯಿದೆ. ಆತ ಕಾಶ್ಮೀರದಲ್ಲಿ ಜಿಹಾದ್ ಚಟುವಟಿಕೆಯಲ್ಲಿ ತೊಡಗಿದ್ದ. ಆದರೆ ಪಾಕಿಸ್ತಾನದಲ್ಲಿ ಆತ ಉಗ್ರನಲ್ಲ. ಕೇವಲ ಭಾರತಕ್ಕೆ ಮಾತ್ರ ಆತ ಉಗ್ರ. ಹಾಗಿದ್ದರೂ ಮುಂಬೈ ಮೇಲಿನ ದಾಳಿಗೆ ಕಾರಣನಾಗಿದ್ದ ಎಂದು ನನಗೆ ಅನಿಸುತ್ತಿಲ್ಲ ಎಂದು ಮುಷರಫ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಭಾರತೀಯ ಸೇನೆಯ ವಿರುದ್ಧ ಹೋರಾಡುವ ಪಾಕ್ ಪರ ಹೋರಾಟಗಾರ ಎಂದು ಮುಷರಫ್ ಭಾರತದ ಮೋಸ್ಟ್ ವಾಂಟೆಡ್ ಉಗ್ರನಿಗೆ ಜೈ ಕಾರ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ