ನ್ಯೂಯಾರ್ಕ್: ಕೊರೋನಾ ಪಾಸಿಟಿವ್ ವರದಿ ಕೈ ಸೇರುವಾಗ ನಾವು ಯಾವ ಪರಿಸ್ಥಿತಿಯಲ್ಲಿರುತ್ತೇವೆ ಎಂದು ಹೇಳಲಾಗದು. ಇಂತಹದ್ದೇ ಒಂದು ವಿಚಿತ್ರ ಪರಿಸ್ಥಿತಿಯನ್ನು ಅಮೆರಿಕಾದ ಮಹಿಳೆಯೊಬ್ಬರು ಎದುರಿಸಿದ್ದಾರೆ.
ಮಿಚಿಗನ್ ನ ಶಿಕ್ಷಕಿಯಾಗಿರುವ ಮರಿಸಾ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ವಿಮಾನದ ಬಾತ್ ರೂಂಗೆ ತೆರಳಿ ರಾಪಿಡ್ ಟೆಸ್ಟ್ ಮಾಡಿದ್ದಾರೆ. ಈ ವೇಳೆ ವರದಿ ಪಾಸಿಟಿವ್ ಬಂದಿದೆ.
ವಿಮಾನ ಭರ್ತಿಯಾಗಿದ್ದರಿಂದ ಆಕೆಯನ್ನು ಪ್ರತ್ಯೇಕವಾಗಿ ಕೂರಿಸಲು ಸೀಟ್ ಇರಲಿಲ್ಲ. ಹೀಗಾಗಿ ಭಯಗೊಂಡಿದ್ದ ಆಕೆಯನ್ನು ವಿಮಾನದ ಬಾತ್ ರೂಂನಲ್ಲೇ ಐಸೋಲೇಟ್ ಮಾಡಲಾಯಿತು. ಬಳಿಕ ವಿಮಾನ ಲ್ಯಾಂಡ್ ಆದ ಮೇಲೆ ಎಲ್ಲರೂ ಇಳಿದಾದ ಬಳಿಕ ಮರಿಸಾರನ್ನು ಕರೆದೊಯ್ಯಲಾಯಿತು ಎನ್ನಲಾಗಿದೆ.