Select Your Language

Notifications

webdunia
webdunia
webdunia
webdunia

ಸೆಲೆಬ್ರೇಷನ್​ಗೆ ಗೋವಾಗೆ ಹಾರಿದ ಜನತೆ!

ಸೆಲೆಬ್ರೇಷನ್​ಗೆ ಗೋವಾಗೆ ಹಾರಿದ ಜನತೆ!
ನವದೆಹಲಿ , ಶುಕ್ರವಾರ, 31 ಡಿಸೆಂಬರ್ 2021 (17:29 IST)
ಕೊರೋನಾ ಬರುವ ಮೊದಲು ಹೇಗೆ ಎಲ್ಲರೂ ರಾಜ್ಯದಲ್ಲಿ ಹೊಸ ವರ್ಷ ಆಚರಿಸುತ್ತಿದ್ದರು ಎಂದು ನೀವೇ ನೆನಪು ಮಾಡಿಕೊಳ್ಳಿ.
 
ಅದೇನು ಸಂಭ್ರಮ, ಅದೇನು ಮಜಾ.. ಅಬ್ಬಾ.. ಅದನ್ನು ನೆನಪಿಸಿಕೊಂಡು ಖುಷಿ ಪಡಬೇಕು ಅಷ್ಟೇ. ಅದರಲ್ಲೂ ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಅದ್ದೂರಿಯಾಗಿ ನಡೆಯುತ್ತಿತ್ತು. ಆದರೆ, ಕೊರೋನಾ ವಕ್ಕರಿಸಿದ ಮೇಲೆ ಇದಕ್ಕೆ ಅವಕಾಶ ಇಲ್ಲ.

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಹೊಸ ವರ್ಷ ವೇಳೆ ಸೋಂಕು ಹರಡುವ ಭೀತಿ ಹೆಚ್ಚಾಗಿತ್ತು.ರಾಜ್ಯ ಸರ್ಕಾರ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದವರಿಗೆ ಇದು ಶಾಕ್ ನೀಡಿತ್ತು. ಒಂದು ತಿಂಗಳ ಮುಂಚೆಯೇ ಹಲವು ಮಂದಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು.

ರಾಜ್ಯದಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೆ, ಈ ನಿರ್ಧಾರದಿಂದ ಕರುನಾಡ ಮಂದಿಗೆ ಬೇಸರ ಆಗಿಲ್ಲ. ಬದಲಾಗಿ ಖುಷಿಯಾಗಿದೆ. ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಮತ್ತೊಂದು ಮಾರ್ಗ ಕಂಡು ಹಿಡಿದಿದ್ದರು. ನಮ್ಮ ರಾಜ್ಯದಲ್ಲಿ ಮಾತ್ರ ಟಫ್ ರೂಲ್ಸ್ ಇದೆ. ಕೆಲ ರಾಜ್ಯಗಳಲ್ಲಿ ಯಾವುದೇ ನಿಯಮಗಳಿಲ್ಲ. ಹೀಗಾಗಿ ಕರುನಾಡ ಮಂದಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಗೋವಾಗೆ ಹಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ತುಪ್ಪ ತಯಾರಿಕೆ ಪ್ರಕರಣ: ತನಿಖೆ ಸಿಬಿಐಗೆ ವಹಿಸಲು ಆಗ್ರಹಿಸಿ ರೈತರ ಪ್ರತಿಭಟನೆ