ವಾಷಿಂಗ್ಟನ್: ವಿಚ್ಛೇದನವಾಗಿ 12 ವರ್ಷವಾದರೂ ಪತ್ನಿಗೆ ಈ ವಿಚಾರವೇ ಗೊತ್ತಿರಲಿಲ್ಲ! ಹೀಗೊಂದು ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ.
1978 ರಲ್ಲಿ ಮದುವೆಯಾಗಿದ್ದ ರಚ್ ಪಾಲ್ ಮತ್ತು ಕೇವಾಲ್ ರಾಂಧವ ಎಂಬ ದಂಪತಿ ಮದುವೆಯಾಗಿದ್ದರು. 2009 ರಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ ನಂತರವೂ ಕಾರ್ಯಕ್ರಮಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದರು. ಪತ್ನಿಗೆ ಮಾತ್ರ ವಿಚ್ಛೇದನದ ವಿಚಾರವೇ ಗೊತ್ತಿರಲಿಲ್ಲ.
ಕಾರಣ, ಪತ್ನಿಯ ಸಹಿಯನ್ನು ಯಾರೋ ಪೋರ್ಜರಿ ಮಾಡಿ ಅಂದು ವಿಚ್ಛೇನ ಪತ್ರಕ್ಕೆ ಸಹಿ ಹಾಕಿದ್ದರು. ಈ ಕಾರಣಕ್ಕೆ ಈಗ ಕೋರ್ಟ್ ವಿಚ್ಛೇದನವನ್ನು ರದ್ದುಗೊಳಿಸಿದೆ. ಅಲ್ಲದೆ, 2011 ರಲ್ಲಿ ಪತಿ ಬೇರೊಂದು ಮದುವೆಯಾಗಿ ಮಗುವೂ ಇದೆ. ಈ ವಿಚಾರವೂ ಪತ್ನಿಗೆ ಗೊತ್ತೇ ಇರಲಿಲ್ಲವಂತೆ!