Daily Horoscope

Select Your Language

Notifications

webdunia
webdunia
webdunia
webdunia

ಒಮನ್ ಗಲ್ಫ್ ಗೆ ಭಾರತ ಇದ್ದಕ್ಕಿದ್ದಂತೆ ಯದ್ಧ ನೌಕೆಗಳನ್ನು ಕಳುಹಿಸಿದ್ದು ಯಾಕೆ: ಇಲ್ಲಿದೆ ಸೀಕ್ರೆಟ್

Indian ship
Photo Credit: X
ನವದೆಹಲಿ: ಒಮನ್ ಗಲ್ಫ್ ಗೆ ಭಾರತ ಇದ್ದಕ್ಕಿದ್ದಂತೆ ಯದ್ಧ ನೌಕೆಗಳನ್ನು ಕಳುಹಿಸಿದೆ. ಇದರ ಹಿಂದಿನ ಕಾರಣವೇನು ಎಂಬುದಕ್ಕೆ ಇಲ್ಲಿದೆ ಅಸಲಿ ಕಾರಣ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈಗ ಯುದ್ಧದ ವಾತಾವರಣವಿದೆ. ಅಮೆರಿಕಾ ಬೆಂಬಲಿಸುತ್ತಿರುವ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಿರಂತರ ದಾಳಿ ನಡೆಸುತ್ತಿದೆ. ಅಲ್ಲಿನ ಅನಿಲ ಘಟಕಗಳನ್ನೂ ಟಾರ್ಗೆಟ್ ಮಾಡಿಕೊಂಡಿವೆ. ಇದರ ನಡುವೆ ಹೊರ್ಮುಜ್ ಜಲಸಂಧಿಯಲ್ಲಿ ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳ ಹಡುಗಗಳನ್ನು ಹೊರತುಪಡಿಸಿ ಉಳಿದ ದೇಶಗಳ ಹಡಗುಗಳು ಸಂಚರಿಸದಂತೆ ನಿರ್ಬಂಧಿಸಿದೆ. ಇದು ಜಾಗತಿಕವಾಗಿ ವ್ಯಾಪಾರ, ವ್ಯವಹಾರಕ್ಕೆ ತೊಂದರೆ ಉಂಟು ಮಾಡುತ್ತಿದೆ.

ಭಾರತದ ಧ್ವಜವಿರುವ ಹಡುಗಗಳಿಗೆ ಹೊರ್ಮುಜ್ ಜಲಸಂಧಿಯನ್ನು ದಾಟಲು ಇರಾನ್ ಅವಕಾಶ ನೀಡುತ್ತಿದೆ. ಹಾಗಿದ್ದರೂ ಯುದ್ಧದ ಸನ್ನಿವೇಶವಾಗಿರುವುದರಿಂದ ಯಾವ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಹೀಗಾಗಿ ತನ್ನ ತೈಲ ಹಡಗುಗಳ ರಕ್ಷಣೆಗೆ ಭಾರತ 6 ಯುದ್ಧ ನೌಕೆಗಳನ್ನು ಕಳುಹಿಸಿ ಕೊಟ್ಟಿದೆ.

ಭಾರತದ ಸುಮಾರು 22 ತೈಲ ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಸಿಲುಕಿಕೊಂಡಿರುವುದಾಗಿ ಕೇಂದ್ರ ಮಾಹಿತಿ ನೀಡಿದೆ. ಈ ಪೈಕಿ ಎಲ್ ಪಿಜಿ, ಕಚ್ಚಾ ತೈಲ ಹಡಗುಗಳು, ಕಂಟೇನರ್ ಹಡಗುಗಳು, ಕಚ್ಚಾ ವಸ್ತುಗಳನ್ನು ಸಾಗಿಸುವ ಹಡಗುಗಳೂ ಸೇರಿವೆ. ಸದ್ಯಕ್ಕೆ ಭಾರತದಲ್ಲಿ ಅನಿಲ, ತೈಲ ಮತ್ತು ಕಚ್ಚಾ ವಸ್ತುಗಳ ಕೊರತೆ ಎದುರಾಗಿದ್ದು, ಈ ಹಡಗುಗಳು ಸುರಕ್ಷಿತವಾಗಿ ಭಾರತಕ್ಕೆ ಬಂದರೆ ತಕ್ಕ ಮಟ್ಟಿಗೆ ಸಮಸ್ಯೆ ಪರಿಹಾರವಾಗಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕತಾರ್ ಅನಿಲ್ ಘಟಕಕ್ಕೆ ದಾಳಿ ಮಾಡಿದ ಇರಾನ್: ಟ್ರಂಪ್ ನೀಡಿದ ಎಚ್ಚರಿಕೆಯೇನು