Webdunia - Bharat's app for daily news and videos

Install App

ಇರಾನ್ ನ ಸರ್ವನಾಶಕ್ಕೆ ಕಾರಣವಾಗಿದ್ದು ಒಬ್ಬ ಮಹಿಳೆ, ಯಾರೀಕೆ

Krishnaveni K
ಸೋಮವಾರ, 23 ಜೂನ್ 2025 (09:45 IST)
AI image
 ಜೆರುಸಲೇಂ: ಇಸ್ರೇಲ್ ಮತ್ತು ಅಮೆರಿಕಾ ಸೇರಿಕೊಂಡು ನಡೆಸುತ್ತಿರುವ ದಾಳಿಯಲ್ಲಿ ಇರಾನ್ ಸರ್ವನಾಶವಾಗುವ ಭೀತಿಯಲ್ಲಿದೆ. ಇರಾನ್ ನ ಇಂದಿನ ಪರಿಸ್ಥಿತಿಗೆ ಕಾರಣ ಒಬ್ಬ ಮಹಿಳೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಅಷ್ಟಕ್ಕೂ ಯಾರೀಕೆ ಇಲ್ಲಿದೆ ವಿವರ.

ಇರಾನ್ ಮೇಲೆ ಇಸ್ರೇಲ್ ಯಶಸ್ಸು ಸಾಧಿಸುತ್ತಿರುವುದಕ್ಕೆ ಕಾರಣ ಈ ಮಹಿಳೆ ಎನ್ನಲಾಗುತ್ತಿದೆ. ಈಕೆಯ ಹೆಸರು ಕ್ಯಾಥರಿನ್ ಪೆರೆಜ್ ಶಕ್ದಮ್. ಈಕೆ ಮೂಲತಃ ಫ್ರಾನ್ಸ್ ನವಳು. ಈಕೆ ಫ್ರಾನ್ಸ್ ನ ಯಹೂದಿ ಕುಟುಂಬದವಳು. ಲಂಡನ್ ವಿವಿಯಲ್ಲಿ ಆರ್ಥಿಕ ಮತ್ತು ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಹಿಳೆ.

ಎರಡು ವರ್ಷದ ಹಿಂದೆ ಮೊಸಾದ್ ನಿಂದ ತರಬೇತಿ ಪಡೆದು ಶಿಯಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಇರಾನ್ ಪ್ರವೇಶಿಸಿದ್ದಳು. ಬಳಿಕ ಇರಾನ್ ನ ಉನ್ನತಾಧಿಕಾರಿಗಳ ಪರಿಚಯ ಮಾಡಿಕೊಂಡಿದ್ದಳು. ಪತ್ರಕರ್ತೆ, ಬರಹಗಾರ್ತಿಯಾಗಿ ಇರಾನ್ ಪರಮೋಚ್ಛ ನಾಯಕ ಖಮೈನಿ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವಂತೆ ಬರೆದು ನಂಬಿಸಿದ್ದಳು.

ಇದೇ ಕಾರಣಕ್ಕೆ ಈಕೆ ಸೇನೆಯ ಉನ್ನತ ಕಮಾಂಡರ್ ಗಳನ್ನು, ಅಧಿಕಾರಿಗಳನ್ನು ಸುಲಭವಾಗಿ ಭೇಟಿ ಮಾಡಲು ಸಾಧ್ಯವಾಯಿತು. ಸಾಮಾನ್ಯರು ಪ್ರವೇಶಿಸದ ಸ್ಥಳಗಳಿಗೂ ಈಕೆಗೆ ಹೋಗಲು ಸಾಧ್ಯವಾಗುತ್ತಿತ್ತು. ಈ ಮೂಲಕ ಇರಾನ್ ನ ಸೇನಾ ಮಾಹಿತಿಯನ್ನು ಇಸ್ರೇಲ್ ಗೆ ರವಾನಿಸುತ್ತಿದ್ದಳು. ಇದರಿಂದಾಗಿ ಸೇನೆಯ ಉನ್ನತ ಕಮಾಂಡರ್ ಗಳನ್ನು ಇಸ್ರೇಲ್ ಸುಲಭವಾಗಿ ಹೊಡೆದು ಹಾಕಲು ಸಾಧ್ಯವಾಯಿತು. ಇಸ್ರೇಲ್ ಇಷ್ಟು ನಿಖರವಾಗಿ ತಮ್ಮ ಸೇನಾಧಿಕಾರಿಗಳು, ನೆಲೆಗಳನ್ನು ಪತ್ತೆ ಮಾಡಿ ದಾಳಿ ನಡೆಸುತ್ತಿದ್ದರಿಂದ ಅನುಮಾನಗೊಂಡು ಇರಾನ್ ಗುಪ್ತಚರ ಸಂಸ್ಥೆ ತನಿಖೆ ನಡೆಸಿತು. ಆಗ ಈ ಮಹಿಳೆ ಬಗ್ಗೆ ಅವರಿಗೆ ತಿಳಿದುಬಂದಿದೆ. ಆದರೆ ಆಕೆಯನ್ನು ಬಂಧಿಸಬೇಕು ಎನ್ನುವಷ್ಟರಲ್ಲಿ ಕಣ್ಮರೆಯಾಗಿದ್ದಾಳೆ. ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿ ಈಗ ಯಾರಿಗೂ ಇಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಮೆಟ್ರೋ ಹಳದಿ ಲೈನ್ ನಲ್ಲಿ ಇದುವರೆಗೆ ಪ್ರಯಾಣಿಸಿದವರೆಷ್ಟು, ಸಿಎಂ ಮಾಹಿತಿ ಇಲ್ಲಿದೆ

ಬಿಕ್ಲು ಶಿವು ಮರ್ಡರ್ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಗೆ ರಿಲೀಫ್

ಗವಿಸಿದ್ದಪ್ಪ ಕುಟುಂಬದವರಿಗೂ 50 ಲಕ್ಷ ರೂ ಕೊಡಿ: ವಿಜಯೇಂದ್ರ ಆಗ್ರಹ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments