Select Your Language

Notifications

webdunia
webdunia
webdunia
webdunia

ಇನ್‌ಶೂರೆನ್ಸ್ ಹಣಕ್ಕಾಗಿ ಹೆತ್ತಪುತ್ರನ ಹತ್ಯೆಗೆ ಸುಪಾರಿ ಕೊಟ್ಟ ದಂಪತಿ

ಇನ್‌ಶೂರೆನ್ಸ್ ಹಣಕ್ಕಾಗಿ ಹೆತ್ತಪುತ್ರನ ಹತ್ಯೆಗೆ ಸುಪಾರಿ ಕೊಟ್ಟ ದಂಪತಿ
london , ಸೋಮವಾರ, 27 ನವೆಂಬರ್ 2023 (09:53 IST)
ಹಣಕ್ಕಾಗಿ ಎಂತಹ ಕೇಲಸ ಮಾಡಲು ಸಿದ್ದವಾಗುತಿದ್ದಾರೆ ಹಣದ ವ್ಯಾಮೋಹಿಗಳು. ಹಣವೇ ಇದೀಗ ಎಲ್ಲಕ್ಕಿಂತ ಮುಖ್ಯವಾಗಿದೆ. ಯಾವುದೇ ಸಂಬಂಧ ಕೂಡಾ ಲೆಕ್ಕಕ್ಕಿಲ್ಲದಂತಾಗಿದೆ. ಹಣಕ್ಕಾಗಿ ಎಂತಹ ಕೆಟ್ಟ ಕೆಲಸ ಮಾಡಲು ಕೂಡಾ ಆಸೆಬುರುಕ ಜನ ಸಿದ್ದವಾಗಿದ್ದಾರೆ. ಇದೀಗ ಹಣದ ಆಸೆಗೆ ತಮ್ಮ ಬಾಕಿ ಉಳಿದಿರುವ ಜೀವನ ಜೈಲಿನಲ್ಲಿ ಕಳೆಯಬೇಕಾಗಿ ಬಂದಂತಹ ಘಟನೆ ಇಲ್ಲಿದೆ ನೋಡಿ. 
 
ವಿಮಾ ಹಣಕ್ಕಾಗಿ ಭಾರತೀಯ ದಂಪತಿ ದತ್ತು ಪುತ್ರನನ್ನು ಸುಫಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಲಂಡನ್ ನಲ್ಲಿ ನಡೆದಿದೆ.
 
ಹ್ಯಾನ್ ವೆಲ್ ನ ಆರತಿ ಧರ್ ಹಾಗೂ ಕವಲ್ ರೈಜಾದಾ ಎನ್ನುವ ದಂಪತಿ  ಗುಜರಾತ್ ನ ಕೇಶೋಡ್ ನಿಂದ ಗೋಪಾಲ್ ಸೇಜನಿ ಎಂಬ ಅನಾಥ ಹುಡುಗನನ್ನು ದತ್ತು ತೆಗೆದುಕೊಂಡಿದ್ದರು. ಬಳಿಕ ಅವನ ಹೆಸರಿನಲ್ಲಿ 1.36 ಕೋಟಿ ರೂ ಮೊತ್ತದ ವಿಮೆ ಮಾಡಿ 2 ಕಂತು ಕಟ್ಟಿದ್ದರು. ಆದರೆ  ಆ ಹುಡುಗನನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿದ್ದರು.
 
ಈ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ವಿಮೆ ಹಣಕ್ಕಾಗಿ ದಂಪತಿಗಳೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ  ಅವರನ್ನು ಇಂಗ್ಲೆಂಡ್ ಪೊಲೀಸ್ ಬಂಧಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್‌ನಿಂದ ಗರ್ಭಿಣಿ: ಅಪ್ರಾಪ್ತಳಿಗೆ ಪಂಚಾಯಿತಿ ಸಲಹೆ ಏನ್ ಗೊತ್ತಾ?