ಹೇಳಿಕೊಳ್ಳಲು ದೊಡ್ಡ ಕಂಪನಿಯೊಂದರ ಸಿಇಒ. ಎರಡು ಮಕ್ಕಳು, ಮುದ್ದಾದ ಮಡದಿ ಮನೆಯಲ್ಲಿದ್ದರೂ ಕಂಪನಿ ಎಚ್ ಆರ್ ಜೊತೆ ಅಫೇರ್ ಇಟ್ಟುಕೊಂಡಿದ್ದ ವ್ಯಕ್ತಿ ಲೈವ್ ಕನ್ಸರ್ಟ್ ನಲ್ಲೇ ಸಿಕ್ಕಿಬಿದ್ದಿದ್ದಾರೆ. ಇಂತಹದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ಮೂಲದ ಕೋಲ್ಡ್ ಪ್ಲೇ ಬ್ಯಾಂಡ್ ಲೈವ್ ಕನ್ಸರ್ಟ್ ನಲ್ಲಿ ಆಸ್ಟ್ರೋನೊಮರ್ ಸಿಇಒ ಆಂಡಿ ಬೈರನ್ ತನ್ನ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಜೊತೆ ಪಾಲ್ಗೊಂಡಿದ್ದಾರೆ. ಕೇವಲ ಕಾರ್ಯಕ್ರಮಕ್ಕೆ ಬಂದಿದ್ದಷ್ಟೇ ಅಲ್ಲ ಎಚ್ ಆರ್ ಮುಖ್ಯಸ್ಥೆ ಜೊತೆ ಕಿಸ್ ಮಾಡುತ್ತಾ ತಬ್ಬಿಕೊಂಡು ರೊಮ್ಯಾಂಟಿಕ್ ಮೂಡ್ ನಲ್ಲಿದ್ದರು.
ಆದರೆ ಅಲ್ಲಿದ್ದ ಕ್ಯಾಮರಾ ಮ್ಯಾನ್ ಇವರಿಬ್ಬರನ್ನು ಸೆರೆ ಹಿಡಿದು ದೊಡ್ಡ ಪರದೆಯ ಮೇಲೆ ಪ್ರಸಾರವಾಗುವಂತೆ ಮಾಡಿಬಿಟ್ಟರು. ತಾವು ಕ್ಯಾಮರಾ ಕಣ್ಣಿಗೆ ಬಿದ್ದೆವು ಎಂದು ಗೊತ್ತಾಗುತ್ತಿದ್ದಂತೇ ಆಂಡಿ ಬೈರನ್ ಮತ್ತು ಮಹಿಳೆ ಎದ್ದೆನೋ ಬಿದ್ದೆನೋ ಎಂದು ಗಾಬರಿಯಿಂದ ಮುಖ ಮುಚ್ಚಿಕೊಂಡಿದ್ದಾರೆ.
ಆಂಡಿ ಬೈರನ್ ಗೆ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೇ ಮುಜುಗರಕ್ಕೊಳಗಾಗಿರುವ ಅವರು ಬಹಿರಂಗವಾಗಿ ತಮ್ಮ ಪತ್ನಿ, ಮಕ್ಕಳು ಮತ್ತು ಸಂಸ್ಥೆಗೆ ಕ್ಷಮೆ ಯಾಚಿಸಿದ್ದಾರೆ. ಆದರೆ ಆಂಡಿ ಬೈರನ್ ವಿಡಿಯೋ ನೋಡಿ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.