Select Your Language

Notifications

webdunia
webdunia
webdunia
webdunia

Video: ಪಾಕಿಸ್ತಾನ ಪ್ರಧಾನಿ ಎದುರೇ ಭಾರತ ಗ್ರೇಟ್, ಮೋದಿ ನನ್ನ ಪ್ರೆಂಡು ಎಂದ ಡೊನಾಲ್ಡ್ ಟ್ರಂಪ್

Trump-Sharif

Krishnaveni K

ವಾಷಿಂಗ್ಟನ್ , ಮಂಗಳವಾರ, 14 ಅಕ್ಟೋಬರ್ 2025 (10:13 IST)
Photo Credit: X
ವಾಷಿಂಗ್ಟನ್: ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಎದುರೇ ಭಾರತ ಅದ್ಭುತ ರಾಷ್ಟ್ರ, ಮೋದಿ ನನ್ನ ಅತ್ಯುತ್ತಮ ಗೆಳೆಯ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

ಈಜಿಪ್ಟ್ ನಲ್ಲಿ ನಡೆದ ಗಾಜಾ ಶಾಂತಿ ಸಮ್ಮೇಳನದಲ್ಲಿ ಹಲವು ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತವನ್ನು ಹೊಗಳಿದ್ದಾರೆ. ಭಾರತ ಶ್ರೇಷ್ಠ ದೇಶ, ಮೋದಿ ನನ್ನ ಒಳ್ಳೆಯ ಸ್ನೇಹಿತ ಕೂಡಾ. ಈಗ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ಚೆನ್ನಾಗಿ ಹೊಂದಿಕೊಳ್ಳುತ್ತಿವೆ ಅಲ್ಲವೇ ಎಂದು ಪಾಕ್ ಪ್ರಧಾನಿ ಷರೀಫ್ ಬಳಿ ತಿರುಗಿ ಪ್ರಶ್ನೆ ಮಾಡಿದರು.

ಅದಕ್ಕೆ ಷರೀಫ್ ಕೂಡಾ ಹೌದೌದು ಎಂದು ತಲೆಯಾಡಿಸಿ ಚಪ್ಪಾಳೆ ತಟ್ಟಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಮೊದಲು ಪಾಕಿಸ್ತಾನ ನಾಯಕ ಮತ್ತು ಸೇನಾ ಮುಖ್ಯಸ್ಥನನ್ನೂ ಟ್ರಂಪ್ ಹೊಗಳಿದ್ದರು.

ಈ ಸಭೆಯಲ್ಲಿ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಷರೀಫ್ ಮತ್ತೊಮ್ಮೆ ಟ್ರಂಪ್ ಗುಣಗಾನ ಮಾಡಿದ್ದು ಮುಂದಿನ ಸಾರಿ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಊರಿಗೆ ಹೋಗ್ಲಿಕುಂಟಾ... ಹೋಗ್ಲಿಕೆ ಮನಸ್ಸುಂಟು ಆದ್ರೆ ಬಸ್ ರೇಟು ಕಡಿಮೆಯಾಗಬೇಕಷ್ಟೇ