ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಹಿಂದುತ್ವ ವಿಶ್ವಕ್ಕೇ ಮಾರಕ, ಇದು ವೇಗವಾಗಿ ಬೆಳೆಯುತ್ತಿದೆ ಎಂದು ಬಡಬಡಿಸಿದ್ದಾರೆ. ಇದಕ್ಕೆ ಭಾರತೀಯರು ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದು ಮೊದಲು ನಿಮ್ಮ ದೇಶದ ಜನಕ್ಕೆ ಊಟ ಕೊಡಿ ಎಂದು ವ್ಯಂಗ್ಯ ಮಾಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಭಾರೀ ಶಾಂತಿಯ ಪಾಠ ಮಾಡಿದ್ದಾರೆ. ಜಗತ್ತಿನ ಎಲ್ಲಿಯೂ ಧ್ವೇಷಕ್ಕೆ ಸ್ಥಾನವಿರಬಾರದು. ಯಾರ ವಿರುದ್ಧವೂ ತಾರತಮ್ಯ ಮಾಡಬಾರದು. ಆದರೆ ಇದು ಭಾರತದಲ್ಲಿ ನಡೆಯುತ್ತಿದೆ. ಭಾರತದಲ್ಲಿ ಅಮೂಲಾಗ್ರ ಹಿಂದುತ್ವದ ಸಿದ್ಧಾಂತವು ವೇಗವಾಗಿ ಬೆಳೆಯುತ್ತಿದೆ. ಇದು ಜಗತ್ತಿಗೇ ದೊಡ್ಡ ಬೆದರಿಕೆ ಮತ್ತು ಮಾರಕವಾಗಿದೆ ಎಂದು ಬುರುಡೆ ಬಿಟ್ಟಿದ್ದಾರೆ.
ಇದಕ್ಕೆ ನೆಟ್ಟಿಗರು ಕಿಡಿ ಕಾರಿದ್ದು, ತಮ್ಮ ದೇಶದಲ್ಲೇ ಭಯೋತ್ಪಾದಕರನ್ನು ಹುಟ್ಟು ಹಾಕಿ, ಬೆಳೆಸಿಕೊಂಡು ಜಗತ್ತಿಗೇ ಬಿಡುತ್ತಿರುವ ಧರ್ಮಾಂದ ದೇಶದ ಬಾಯಲ್ಲಿ ಹಿಂದೂಗಳ ಬಗ್ಗೆ ಮಾತು ಚೆನ್ನಾಗಿದೆ. ಮೊದಲು ನಿಮ್ಮ ದೇಶವನ್ನು ಸರಿಯಾಗಿ ನೋಡಿಕೊಳ್ಳಿ, ನಿಮ್ಮ ಜನರಿಗೆ ಊಟ ಹಾಕಿ. ನಂತರ ಬೇರೆ ದೇಶದ ಬಗ್ಗೆ ಮಾತನಾಡಿ ಎಂದು ತಿರುಗೇಟು ಕೊಟ್ಟಿದ್ದಾರೆ.