Select Your Language

Notifications

webdunia
webdunia
webdunia
webdunia

ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನ?

ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನ?
ವಾಷಿಂಗ್ಟನ್ , ಮಂಗಳವಾರ, 7 ಮಾರ್ಚ್ 2023 (12:25 IST)
ವಾಷಿಂಗ್ಟನ್ : ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ತುರ್ತು ನಿರ್ಗಮನದ ದ್ವಾರ ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.
 
ಯುನೈಟೆಡ್ ಏರ್ಲೈನ್ಸ್ ವಿಮಾನವು ಲಾಸ್ ಏಂಜಲೀಸ್ನಿಂದ ಬೋಸ್ಟನ್ಗೆ ಹೊರಟಿತ್ತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ್ದ.

ಅಲ್ಲದೇ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆಗೂ ಮುಂದಾಗಿದ್ದ. ಪ್ರಯಾಣಿಕ ಟೊರೆಸ್ ಎಂಬಾತನನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಟೊರೆಸ್ನನ್ನು ಪ್ರಶ್ನಿಸಿದಾಗ, ಸಿಬ್ಬಂದಿ ಮೇಲೆಯೇ ಅಪಾಯಕಾರಿ ಆಯುಧ ಬಳಸಿ ಹಲ್ಲೆಗೆ ಮುಂದಾಗಿದ್ದಾನೆ. ಆತನನ್ನು ಪೊಲೀಸರ ವಶಕ್ಕೆ ನೀಡಲಾಯಿತು. ನ್ಯಾಯಾಲಯವು ಮಾ.9ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಪ್ರಯಾಣಿಕ ಟೊರೆಸ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿದ್ದರೂ, ಆಸ್ತಿಯನ್ನು UP ಸರ್ಕಾರದ ಹೆಸರಿಗೆ ಬರೆದ ವೃದ್ಧ