Select Your Language

Notifications

webdunia
webdunia
webdunia
webdunia

ಅಮ್ಮನ ಹಾಲು ಸಿಗದೇ ಅಳುತ್ತಿದ್ದ ಮಗುವಿಗೆ ಈ ಗಗನಸಖಿ ಮಾಡಿದ್ದೇನು ಗೊತ್ತಾ?!

ಅಮ್ಮನ ಹಾಲು ಸಿಗದೇ ಅಳುತ್ತಿದ್ದ ಮಗುವಿಗೆ ಈ ಗಗನಸಖಿ ಮಾಡಿದ್ದೇನು ಗೊತ್ತಾ?!
ನವದೆಹಲಿ , ಮಂಗಳವಾರ, 13 ನವೆಂಬರ್ 2018 (10:35 IST)
ನವದೆಹಲಿ: ಗಗನ ಸಖಿಯರು ವಿಮಾನದಲ್ಲಿ ಪ್ರಯಾಣಿಕರ ಬೇಕು ಬೇಡಗಳನ್ನು ಗಮನಿಸುತ್ತಾರೆ. ಆದರೆ ಅದಕ್ಕೊಂದು ಮಿತಿಯಿರುತ್ತದೆ. ಆದರೆ ಈ ಗಗನ ಸಖಿ ಮಾಡಿದ ಕೆಲಸ ನೋಡಿ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫಿಲಿಪ್ಪೈನ್ಸ್  ಏರ್ ಲೈನ್ಸ್ ವಿಮಾನದ ಗಗನ ಸಖಿ ಪಟ್ರಿಶಾ ಒರ್ಗಾನೋ ಎಂಬಾಕೆ ಅಮ್ಮನ ಹಾಲು ಸಿಗದೇ ಅಳುತ್ತಿದ್ದ ಮಗುವನ್ನು ತನ್ನ ಮಡಿಲಲ್ಲಿ ಹಾಕಿಕೊಂಡು ತನ್ನ ಎದೆ ಹಾಲುಣಿಸಿ ಸಮಾಧಾನಿಸಿದ್ದಾಳೆ. ಇದನ್ನು ಆಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಫಿಲಿಪ್ಪೈನ್ಸ್ ವಿಮಾನ ಟೇಕ್ ಆಫ್ ಆದ ಗಳಿಗೆಯಲ್ಲಿ ಒಂದು ಮಗು ವಿಪರೀತ ಅಳುತ್ತಿದ್ದು, ಪಕ್ಕದ ಪ್ರಯಾಣಿಕರಿಗೂ ತೀವ್ರ ಕಿರಿ ಕಿರಿಯಾಗುತ್ತಿದ್ದನ್ನು ಗಮನಿಸಿದೆ. ಆಗ ನಾನು ಆ ಅಮ್ಮನ ಬಳಿ ಹೋಗಿ ಮಗುವಿಗೆ ಹಾಲುಣಿಸಿ ಮಲಗಿಸಿ ಎಂದೆ. ಆದರೆ ಆ ತಾಯಿ ಕಣ್ಣೀರು ಹಾಕಿ ನನ್ನಲ್ಲಿ ಹಾಲಿಲ್ಲ ಎಂದರು.

ಹೀಗಾಗಿ ಬೇರೆ ದಾರಿ ಕಾಣದೆ ಮಗುವನ್ನು ನಾನು ಎತ್ತಿಕೊಂಡು ಅದು ನಿದ್ರಿಸುವವರೆಗೂ ನನ್ನ ಎದೆ ಹಾಲುಣಿಸಿದೆ. ಇದರಿಂದ ಮಗುವೂ ನಿದ್ರಿಸಿತು, ಆ ಮಗುವಿನ ತಾಯಿಯೂ ಹೃದಯ ಪೂರ್ವಕವಾಗಿ ಧನ್ಯವಾದ ಹೇಳಿದರು. ಎದೆ ಹಾಲು ನೀಡಿದ ಆ ದೇವರಿಗೆ ದೊಡ್ಡ ಧನ್ಯವಾದ ಎಂದು ಒರ್ಗಾನೋ ಬರೆದುಕೊಂಡಿದ್ದಾರೆ. ಈಕೆಯ ಪೋಸ್ಟ್ ಇದೀಗ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಷನಲ್ ಕಾಲೇಜು ಮೈದಾನದತ್ತ ಅನಂತ ಯಾತ್ರೆ