ಅಮ್ಮ ಸಾನಿಯಾ ಮಿರ್ಜಾ ಮಡಿಲಲ್ಲಿ ಮಲಗಿ ತಂದೆ ಶೊಯೇಬ್ ಕ್ರಿಕೆಟ್ ಆಡುವುದನ್ನು ನೋಡಿದ ಪುಟಾಣಿ ಇಝಾನ್!

ಗುರುವಾರ, 8 ನವೆಂಬರ್ 2018 (07:42 IST)
ಹೈದರಾಬಾದ್: ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮವಿತ್ತ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಪುತ್ರನನ್ನು ಮಡಿಲಲ್ಲಿ ಮಲಗಿಸಿಕೊಂಡು ಪತಿ ಶೊಯೇಬ್ ಕ್ರಿಕೆಟ್ ಆಡುವುದನ್ನು ವೀಕ್ಷಿಸಿದ್ದಾರೆ.

ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಇದೀಗ ತಮ್ಮ ದೇಶದ ಪರ ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಆಡುತ್ತಿದ್ದಾರೆ. ಈ ಪಂದ್ಯವನ್ನು ಸಾನಿಯಾ ತಮ್ಮ ನವಜಾತ ಶಿಶು ಇಝಾನ್ ಗೆ ಟಿವಿಯಲ್ಲಿ ತೋರಿಸಿದ್ದಾರೆ.

ಈ ಫೋಟೋವನ್ನು ಸಾನಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಭಾರೀ ವೈರಲ್ ಆಗಿದೆ. ಫೋಟೋ ಜತೆಗೆ,  ನಾನು ಅಮ್ಮನಾಗಿ, ನನ್ನ ಮಗು ಈ ಭೂಮಿಗೆ ಕಾಲಿಟ್ಟು ಕೇವಲ ಐದು ದಿನಗಳಾಗಿವೆ. ಆಗಲೇ ಅಪ್ಪ ಕ್ರಿಕೆಟ್ ಆಡುವುದನ್ನು ಆತ ಟಿವಿಯಲ್ಲಿ ನೋಡುವುದರಲ್ಲಿ ಮಗ್ನನಾಗಿದ್ದಾನೆ. ಅಮ್ಮನಾದ ಖುಷಿ ನಾನು ಇದುವರೆಗೆ ಗೆದ್ದ ಯಾವ ಪ್ರಶಸ್ತಿಯೂ ಕೊಟ್ಟಿಲ್ಲ’ ಎಂದು ಸಾನಿಯಾ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ ಬಿಟ್ಟು ತೊಲಗಿ ಎಂದು ಅಭಿಮಾನಿ ಮೇಲೆ ಹರಿಹಾಯ್ದ ವಿರಾಟ್ ಕೊಹ್ಲಿ