Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ ಪುತ್ರನಿಗೆ ಪಾಕ್ ಪೌರತ್ವ ಯಾಕಿಲ್ಲ ಗೊತ್ತಾ?

ಸಾನಿಯಾ ಮಿರ್ಜಾ ಪುತ್ರನಿಗೆ ಪಾಕ್ ಪೌರತ್ವ ಯಾಕಿಲ್ಲ ಗೊತ್ತಾ?
ಹೈದರಾಬಾದ್ , ಶನಿವಾರ, 3 ನವೆಂಬರ್ 2018 (08:23 IST)
ಹೈದರಾಬಾದ್: ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪುತ್ರನಿಗೆ ತಂದೆ ಶೊಯೇಬ್ ಮಲಿಕ್ ರ ಪಾಕಿಸ್ತಾನದ ಪೌರತ್ವ ಸಿಗುತ್ತದೆಯೇ?

ಈ ಬಗ್ಗೆ ಪಾಕಿಸ್ತಾನದ ದೈನಿಕವೊಂದು ಅಲ್ಲಿನ ಕಾನೂನು ತಜ್ಞರ ಮಾತುಗಳನ್ನು ಉಲ್ಲೇಖಿಸಿ ಸ್ಪಷ್ಟನೆ ನೀಡಿದೆ. ಅದರ ಪ್ರಕಾರ ಸಾನಿಯಾ ಪುತ್ರನಿಗೆ ಪಾಕಿಸ್ತಾನದ ನಾಗರಿಕತ್ವ ಸಿಗದು.

ಶೊಯೇಬ್ ರನ್ನು ಮದುವೆಯಾದ ಬಳಿಕವೂ ಸಾನಿಯಾ ಭಾರತೀಯ ನಾಗರಿಕತ್ವ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈಗಾಗಲೇ ಸಾನಿಯಾ ಪುತ್ರನಿಗೆ ಸಹಜವಾಗಿಯೇ ಭಾರತೀಯ ಪೌರತ್ವ ಸಿಗಬಹುದು.  ಒಬ್ಬ ಭಾರತೀಯನ ಪುತ್ರನಿಗೆ ಪಾಕ್ ನಾಗರಿಕತ್ವ ಸಿಗದು. ವಿಶ್ವದ 19 ರಾಷ್ಟ್ರಗಳೊಂದಿಗೆ ಪಾಕ್ ದ್ವಿ ಪೌರತ್ವ ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಆ ರಾಷ್ಟ್ರಗಳ ಪೈಕಿ ಭಾರತದ ಹೆಸರಿಲ್ಲ. ಹೀಗಾಗಿ ಸಾನಿಯಾ ಪುತ್ರನಿಗೆ ಪಾಕ್ ನಾಗರಿಕತ್ವ ಸಿಗದು ಎಂದು ವರದಿಯಲ್ಲಿ ಹೇಳಲಾಗಿದೆ.

ಇದಕ್ಕೂ ಮೊದಲೇ ಕಾರ್ಯಕ್ರಮವೊಂದರಲ್ಲಿ ಶೊಯೇಬ್ ಮಲಿಕ್ ತಮಗೆ ಜನಿಸುವ ಮಗುವಿನ ನಾಗರಿಕತ್ವ ಯಾವ ರಾಷ್ಟ್ರದ್ದು ಎನ್ನುವುದು ಮುಖ್ಯವಲ್ಲ ಎಂದಿದ್ದರು. ಸಾನಿಯಾ ತಮ್ಮ ಮಗು ಭಾರತ ಮತ್ತು ಪಾಕಿಸ್ತಾನದ ಹೊರತಾದ ಮೂರನೇ ರಾಷ್ಟ್ರದ ಪೌರತ್ವ ಪಡೆಯುತ್ತದೆ ಎಂದಿದ್ದರು. ಹೀಗಾಗಿ ದುಬೈ ಪೌರತ್ವ ಪಡೆಯಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನು ತಂಡದಿಂದ ಕೈಬಿಟ್ಟ ಬಗ್ಗೆ ಕೊನೆಗೂ ಬಾಯ್ಬಿಟ್ಟ ವಿರಾಟ್ ಕೊಹ್ಲಿ