ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದ ಸಾಮಾಜಿಕ ಹೋರಾಟಗಾರರು, ಮಾಧ್ಯಮದವರು

ಮಂಗಳವಾರ, 29 ಅಕ್ಟೋಬರ್ 2019 (07:14 IST)
ಪಾಕಿಸ್ತಾನ : ಮಾಧ್ಯಮ ಹಾಗೂ ಸಾಮಾಜಿಕ ಹೋರಾಟಗಾರರ ಮೇಲೆ  ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರ ದಬ್ಬಾಳಿಕೆ ನಡೆಸಿದ ಕಾರಣ ಪಾಕಿಸ್ತಾನದ ಹೋರಾಟಗಾರರು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಸಾಮಾಜಿಕ ಹೋರಾಟಗಾರ ಜಿಬ್ರಾನ್ ನಾಜೀರ್ ಎಂಬುವವರು ಸುದ್ದಿಗೋಷ್ಟಿ ನಡೆಸುತ್ತಿದ್ದ ವೇಳೆ ಪಾಕ್ ಸರ್ಕಾರ ದರ್ಪ ತೋರಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಪಾಕ್ ಮಾಧ್ಯಮಗಳು  ಪ್ರಸಾರಮಾಡಿವೆ. ಇದಕ್ಕೆ ಸರ್ಕಾರ ಮಾಧ್ಯಮ ಹಾಗೂ ಸಾಮಾಜಿಕ ಹೋರಾಟಗಾರರ ಮೇಲೆ  ದಬ್ಬಾಳಿಕೆ  ನಡೆಸಿದೆ.


ಈ ಹಿನ್ನಲೆಯಲ್ಲಿ ‘ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರು, ಸಾಹಿತಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜಗತ್ತಿನ ಅತಿ ಚಿಕ್ಕ ಕ್ಯಾಮರಾ ಕಂಡುಹಿಡಿದ ಓಮ್ನಿವಿಷನ್ ಟೆಕ್ನಾಲಜಿ