Webdunia - Bharat's app for daily news and videos

Install App

ಶತಮಾನಗಳಿಂದ ಭೇದಿಸಲಾಗದ ಬರ್ಮುಡಾ ತ್ರಿಕೋನ ರಹಸ್ಯ ಕೊನೆಗೂ ಬಯಲು

Webdunia
ಶುಕ್ರವಾರ, 3 ಆಗಸ್ಟ್ 2018 (14:32 IST)
ಲಂಡನ್ : ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಶತಮಾನಗಳಿಂದ ಯಾರು ಭೇದಿಸಲಾಗದ ಬರ್ಮುಡಾ ತ್ರಿಕೋನದ ರಹಸ್ಯವನ್ನು ಇದೀಗ ಬ್ರಿಟಿಷ್‌ ವಿಜ್ಞಾನಿಗಳು ಭೇದಿಸಿದ್ದಾರೆ.


ಅಟ್ಲಾಂಟಿಕ್ ಮಹಾಸಾಗರದ ಫ್ಲೋರಿಡಾದಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶದ ನಡುವಣ ತ್ರಿಕೋನಾಕೃತಿಯ ಭಾಗವೇ ಈ ಬರ್ಮುಡಾ ಟ್ರಯಾಂಗಲ್. ಈ ಪ್ರದೇಶದಲ್ಲಿ ಹಾದುಹೋಗುವ ವಿಮಾನಗಳು ಇದ್ದಕ್ಕಿದ್ದಂತೇ ನಾಪತ್ತೆಯಾಗುವುದಲ್ಲದೆ ಹಡಗುಗಳು ಅಪಘಾತಕ್ಕೀಡಾಗುವುದು. ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಇದು ಆಹುತಿ ತೆಗೆದುಕೊಂಡಿದೆ. ಇದರ ರಹಸ್ಯವನ್ನು ಭೇದಿಸಲು ಹಲವು ವಿಜ್ಞಾನಿಗಳು ಬಂದರೂ ಕೂಡ ಬರಿಗೈಯಲ್ಲಿ ಹಿಂದಿರುಗಿದ್ದಾರೆ. ಆದರೆ ಇದೀಗ ಈ ಭೌಗೋಳಿಕ ರಹಸ್ಯವನ್ನು ಕೊನೆಗೂ ಭೇದಿಸಲಾಗಿದೆ ಎಂದು ಚಾನೆಲ್ 5 ತನ್ನ ಡಾಕ್ಯುಮೆಂಟರಿಯಲ್ಲಿ ಹೇಳಿಕೊಂಡಿದೆ.


ಚಾನೆಲ್‌ 5ನಲ್ಲಿ ದಿ ಬರ್ಮುಡಾ ಟ್ರ್ಯಾಂಗಲ್‌ ಎನಿಗ್ಮಾ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿರುವ ಸೌತಾಂಪ್ಟನ್‌ ಯುನಿವರ್ಸಿಟಿಯ ತಜ್ಞರು ಈ ರಾಕ್ಷಸ ಅಲೆಗಳನ್ನು ನೈಸರ್ಗಿಕ ವಿದ್ಯಮಾನ ಎಂದು ಬಣ್ಣಿಸಿದ್ದಾರೆ. ಜತೆಗೆ ಸಿಮ್ಯುಲೇಟರ್‌ಗಳನ್ನು ಉಪಯೋಗಿಸಿ ಕೊಂಡು ದೈತ್ಯ ನೀರಿನ ಅಲೆಗಳನ್ನು ಮರುಸೃಷ್ಟಿ ಮಾಡಿ ವಿವರಣೆ ನೀಡಿದ್ದಾರೆ.


ಈ ದೈತ್ಯ ಅಲೆಗಳು ಕೆಲ ನಿಮಿಷಗಳಷ್ಟು ಹೊತ್ತು ಮಾತ್ರ ಇರುತ್ತವೆ. ಕೆಲವೊಂದು 100 ಅಡಿಗಳಷ್ಟು ಎತ್ತರಕ್ಕೂ ಬರುತ್ತವೆ. ಇದನ್ನು 1997ರಲ್ಲಿ ಮೊದಲ ಬಾರಿಗೆ ಉಪಗ್ರಹದ ಮೂಲಕ ಪತ್ತೆ ಮಾಡಲಾಗಿದೆ. ದಕ್ಷಿಣ ಮತ್ತು ಉತ್ತರದಿಂದ ಹಾಗೂ ಇದರೊಂದಿಗೆ ಫ್ಲೋರಿಡಾ ದಿಂದ ಬಿರುಗಾಳಿ ಒಟ್ಟಿಗೆ ಬರುವುದರಿಂದಾಗಿ ರಾಕ್ಷಸ ಸ್ವರೂಪ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಮುಂದಿನ ಸುದ್ದಿ
Show comments