ಮಾಸ್ಕೋ : ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಘೋಷಣೆ ಮಾಡಿದ್ದೇ ತಡ, ರಷ್ಯಾದ ಕ್ಷಿಪಣಿಗಳು ಬೆಂಕಿಯ ಮಳೆಯನ್ನೇ ಸುರಿಸುತ್ತಿವೆ.
ಲೆಕ್ಕವಿಲ್ಲದಷ್ಟು ಕ್ಷಿಪಣಿಗಳು ಉಕ್ರೇನ್ ನೆಲಕ್ಕೆ ಅಪ್ಪಳಿಸಿದ್ದು, ಅಪಾರ ಸಾವು ನೋವು ಸಂಭವಿಸಿದೆ.
ಈವರೆಗೆ ಸಿಕ್ಕ ಲೆಕ್ಕದ ಪ್ರಕಾರ 40ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಹಾಗೂ 10 ಹೆಚ್ಚು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಇದು ರಷ್ಯಾ ಸೇನೆಯ ಕಾರ್ಯಾಚರಣೆ ಆರಂಭವಾದ ಒಂದೇ ಗಂಟೆಯಲ್ಲಿ ಆದ ಜೀವ ಹಾನಿಯ ಲೆಕ್ಕಾಚಾರ..!
ಇನ್ನೊಂದೆಡೆ ಉಕ್ರೇನ್ ಕೂಡಾ ತಾನು ರಷ್ಯಾದ 50ಕ್ಕೂ ಹೆಚ್ಚು ಬಂಡುಕೋರರನ್ನು ಹೊಡೆದುರುಳಿಸಿರೋದಾಗಿ ಹೇಳಿಕೊಂಡಿದೆ. ಉಕ್ರೇನ್ ಗಡಿಯಾದ್ಯಂತ ಎಲ್ಲ ದಿಕ್ಕುಗಳಿಂದಲೂ ರಷ್ಯಾ ಸೇನೆ ಆಕ್ರಮಣ ನಡೆಸುತ್ತಿದ್ದು, ಭೂ ಸೇನೆ ಇಡೀ ಉಕ್ರೇನ್ ದೇಶವನ್ನೇ ಸುತ್ತುವರೆದಿದೆ.
ಉಕ್ರೇನ್ ದೇಶದ ವಾಯು ನೆಲೆ ಹಾಗೂ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಧ್ವಂಸ ಮಾಡಿರೋದಾಗಿ ಹೇಳಿಕೊಂಡಿರುವ ರಷ್ಯಾದ ರಕ್ಷಣಾ ಸಚಿವಾಲಯ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿರೋದಾಗಿ ಮಾಹಿತಿ ನೀಡಿದೆ.