Select Your Language

Notifications

webdunia
webdunia
webdunia
webdunia

ರಷ್ಯಾ ಮೇಲೆ ನಿರ್ಬಂಧ ಹೇರಿದ ಅಮೆರಿಕ!

ರಷ್ಯಾ ಮೇಲೆ ನಿರ್ಬಂಧ ಹೇರಿದ ಅಮೆರಿಕ!
ವಾಷಿಂಗ್ಟನ್ , ಬುಧವಾರ, 23 ಫೆಬ್ರವರಿ 2022 (07:49 IST)
ವಾಷಿಂಗ್ಟನ್ : ರಷ್ಯಾ, ಉಕ್ರೇನ್ ವಿರುದ್ಧ ಯುದ್ದ ಕಹಳೆ ಕೂಗಿದ್ದು, ರಷ್ಯಾದ ಸೈನ್ಯ ಉಕ್ರೇನ್ನಲ್ಲಿದೆ. ಈ ಹಿನ್ನೆಲೆ ಅಮೆರಿಕ, ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧಗಳನ್ನು ಹೇರಿದೆ.
 
ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಎನ್ಎಟಿಒ ಒಪ್ಪಂದದಡಿ ರಷ್ಯಾದ ಮೇಲೆ ಕೆಲವೊಂದು ನಿರ್ಬಂಧ ಹೇರಲಾಗಿದೆ. ಉಕ್ರೇನ್ ನ ಮತ್ತು ಅಮೆರಿಕದ ಯಾವುದೇ ಪ್ರದೇಶಗಳ ಮೇಲೆ ನಿರ್ಧಾರ ಕೈಗೊಳ್ಳುವ, ಯಾವುದೇ ವ್ಯಕ್ತಿ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ಉಕ್ರೇನ್ನ ಡಿಎನ್ಆರ್ ಮತ್ತು ಎಲ್ಎನ್ಆರ್ ಎಂದು ಕರೆಯಲ್ಪಡುವ ಡೊನಸ್ಕ್ ಮತ್ತು ಲಂಗಸ್ಕ್ ಪ್ರದೇಶದಲ್ಲಿ ಅಮೆರಿಕದ ಪ್ರಜೆಗಳು ಯಾವುದೇ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ನೆರವು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಶ್ವೇತಭವನದಲ್ಲಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆ ಕಲಾಪ ಮುಂದೂಡಿಕೆ