Select Your Language

Notifications

webdunia
webdunia
webdunia
webdunia

ವಿಧಾನಸಭೆ ಕಲಾಪ ಮುಂದೂಡಿಕೆ

ವಿಧಾನಸಭೆ ಕಲಾಪ ಮುಂದೂಡಿಕೆ
ಬೆಂಗಳೂರು , ಬುಧವಾರ, 23 ಫೆಬ್ರವರಿ 2022 (06:53 IST)
ಬೆಂಗಳೂರು : ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿದ್ದ ಧರಣಿ ಸತತ ಐದನೇ ದಿನವೂ ಮುಂದುವರಿದಿದ್ದು, ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ ಮಾಡಲಾಗಿದೆ.
 
ಕಾಂಗ್ರೆಸ್ ಗದ್ದಲದ ನಡೆವೆಯೂ ಇವತ್ತು ಎರಡು ಬಿಲ್ಗಳನ್ನು ಮಂಡಿಸಿದ ಸರ್ಕಾರ ಆಂಗೀಕಾರವನ್ನು ಪಡೆದುಕೊಂಡಿದೆ. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ್ರು.

ಬಳಿಕ ವಿಧಾನಸಭೆ ಕಲಾಪವನ್ನು ಮಾರ್ಚ್ ನಾಲ್ಕಕ್ಕೆ ಮುಂದೂಡಲಾಯಿತು. ಸಿಎಂ ಮಾತನಾಡುವ ವೇಳೆಯೂ ಕಾಂಗ್ರೆಸ್ ಸದಸ್ಯರು ಅಡ್ಡಿಮಾಡಲು ಪ್ರಯತ್ನಿಸಿದ್ರು. ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಕಾಂಗ್ರೆಸ್ ಧರಣಿಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಆರಂಭದ ಎರಡು ದಿನ ಮಾತ್ರ ಕಲಾಪ ನಡೆಯಿತು.

 ಉಳಿದ ಐದು ದಿನ ನಿಮ್ಮದೇ ಗದ್ದಲ ಆಗಿದೆ. ಜನ ಈ ನಿಮ್ಮ ಗಲಾಟೆ ನೋಡುತ್ತಾ ಕೂರಲು ಸಾಧ್ಯವಿಲ್ಲ. ಇನ್ನು ಮೂರು ದಿನ ಸದನ ಕಲಾಪ ನಡೆಯಲು ಸಹಕರಿಸಬೇಕು. ಇಲ್ಲದಿದ್ರೆ ಸದನವನ್ನು ಮುಂದೂಡುತ್ತೇನೆ. ಸದನ ಮೌಲ್ಯ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆ : ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ