Publish Date: Tue, 22 Feb 2022 (20:27 IST)
Updated Date: Tue, 22 Feb 2022 (20:28 IST)
ಭಾರತದಲ್ಲಿ ಇಂದು ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 13,405 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 13.405 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 235 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 5,12,344 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 13,405 ಹೊಸ #COVID19 ಪ್ರಕರಣಗಳು, 34,226 ಚೇತರಿಕೆಗಳು ಮತ್ತು 235 ಸಾವುಗಳು ಸಂಭವಿಸಿವೆ ಎಂದು ಭಾರತ ವರದಿ ಮಾಡಿದೆ.
ಸಕ್ರಿಯ ಪ್ರಕರಣ: 1,81,075 (0.42%)
ದೈನಂದಿನ ಧನಾತ್ಮಕತೆ ದರ: 1.24%
ಒಟ್ಟು ಚೇತರಿಕೆಗಳು: 4,21,58,510
ಸಾವಿನ ಸಂಖ್ಯೆ: 5,12,344.
ಒಟ್ಟು ಲಸಿಕೆ: 1,75,83,27,441.