Select Your Language

Notifications

webdunia
webdunia
webdunia
webdunia

ಎರಡೂ ಡೋಸ್ ಪಡೆದ ಪ್ರಯಾಣಿಕರಿಗೆ ಪರೀಕ್ಷೆ ಕಡ್ಡಾಯವಿಲ್ಲ

ಎರಡೂ ಡೋಸ್ ಪಡೆದ ಪ್ರಯಾಣಿಕರಿಗೆ ಪರೀಕ್ಷೆ ಕಡ್ಡಾಯವಿಲ್ಲ
ಲಂಡನ್ , ಮಂಗಳವಾರ, 25 ಜನವರಿ 2022 (06:11 IST)
ಲಂಡನ್ : ಹೊರ ದೇಶಗಳಿಂದ ಇಂಗ್ಲೆಂಡ್ಗೆ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸುವ ನಿಯಮವನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.

ಸೋಂಕು ಪ್ರಕರಣಗಳ ಸಂಖ್ಯೆ ಇಳಿಯುತ್ತಿದೆ. ಹೀಗಾಗಿ ಬೇರೆ ದೇಶಗಳಿಂದ ಬರುವವರಿಗೆ ಇರುವ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು. ಈ ವಿನಾಯಿತಿ ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಇಂಗ್ಲೆಂಡ್ ವ್ಯಾಪಾರ ಹಾಗೂ ಪ್ರಯಾಣಿಕರಿಗೆ ಮುಕ್ತವಾಗಿದೆ. ಆದ್ದರಿಂದ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಲು ಸರ್ಕಾರ ನಿರ್ಧರಿಸಿದೆ. ಲಸಿಕೆ ಎರಡೂ ಡೋಸ್ ಪಡೆದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ ಎಂದು ಹೇಳಿದ್ದಾರೆ.

ನಿರ್ಬಂಧ ಸಡಿಲಿಕೆ ದಿನಾಂಕವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಕೋವಿಡ್ ಲಸಿಕೆಯನ್ನು ಸಂಪೂರ್ಣವಾಗಿ ಪಡೆದವರಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಪಿಯು ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಣೆ | ಜನವರಿ 31, 2022 ರವರೆಗೆ ಅವಕಾಶ