ಅತ್ಯಾಚಾರ ತಡೆಯುವ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದೆ ಇಂತಹ ದೌರ್ಜನ್ಯ

ಸೋಮವಾರ, 28 ಜನವರಿ 2019 (07:10 IST)
ದಕ್ಷಿಣ ಆಫ್ರಿಕಾ : ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ  ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಯಲು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಎಸಗುತ್ತಿದ್ದ ದೌರ್ಜನ್ಯದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ಸ್ತನ ದೊಡ್ಡದಾಗಿ ಬೆಳೆಯುವುದರಿಂದ ಪುರುಷರು ಯುವತಿಯರ ಮೇಲೆ ಮೋಹಕ್ಕೆ ಒಳಗಾಗಿ, ಅತ್ಯಾಚಾರ ಮಾಡುತ್ತಾರೆ ಎನ್ನುವ ಕಾರಣಕ್ಕೆ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಸ್ತನ ಬೆಳೆಯದಂತೆ ಬಿಸಿ ಕಲ್ಲನ್ನು ಯುವತಿಯರ ಎದೆಗೆ ಉಜ್ಜುವ ಮೂಲಕ ಆ ಭಾಗದಲ್ಲಿರುವ ಅಂಗಾಂಶ ನಾಶ ಮಾಡುತ್ತಿದ್ದಾರಂತೆ. ಈ ಕೆಟ್ಟ ಸಂಪ್ರದಾಯವನ್ನು ಯುವತಿಯರ ತಾಯಿ,‌ ಅಜ್ಜಿಯಂದಿರು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಇದರಿಂದ ಯುವತಿಯರಿಗೆ ದೈಹಿಕ ಹಾಗೂ ಮಾನಸಿಕವಾಗಿ ದುಷ್ಪರಿಣಾಮ ಬೀರುವುದರ ಜೊತೆಗೆ ಅವರು ತಾಯಿಯಾದಾಗ ಎದೆಹಾಲು ಉತ್ಪತ್ತಿಯಾಗುವುದಿಲ್ಲ ಎಂದು ಹೇಳಲಾಗಿದೆ. ದಕ್ಷಿಣ ಆಫ್ರಿಕಾದ ಕೆಲ ಭಾಗದಲ್ಲಿ ಇದು ನಿರಂತರವಾಗಿ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿಯೊಬ್ಬರು  ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲವರ್ ಜೊತೆ ಓಡಿಹೋಗಲು ಯತ್ನಿಸಿದ ಮಹಿಳೆಗೆ ಪತಿಯ ಸಂಬಂಧಿಕರು ವಿಧಿಸಿದ ಶಿಕ್ಷೆ ಏನು ಗೊತ್ತಾ?