Select Your Language

Notifications

webdunia
webdunia
webdunia
webdunia

ಶುಭಾಂಶು ಶುಕ್ಲಾ ಹೊರಟಿದ್ದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಯಶಸ್ವೀ ಡಾಕಿಂಗ್

Shubanshu Shukla

Krishnaveni K

ಫ್ಲೋರಿಡಾ , ಗುರುವಾರ, 26 ಜೂನ್ 2025 (17:04 IST)
ಫ್ಲೋರಿಡಾ: ಅಮೆರಿಕಾದ ನಾಸಾ ಸಂಸ್ಥೆಯಿಂದ ನಿನ್ನೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಸೇರಿದಂತೆ ನಾಲ್ವರನ್ನು ಹೊತ್ತು ಹೊರಟಿದ್ದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಯಶಸ್ವಿಯಾಗಿ ಡಾಕಿಂಗ್ ಆಗಿದೆ. ಇದೀಗ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಬಂದಿಳಿದಿದ್ದಾರೆ.

ಇದು ಭಾರತೀಯರ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ರಾಕೇಶ್ ಶರ್ಮಾ ಬಳಿಕ ಬಾಹ್ಯಾಕಾಶಕ್ಕೆ ಯಾತ್ರೆ ಮಾಡಿದ ಏಕೈಕ ಭಾರತೀಯ ಶುಭಾಂಶು ಶುಕ್ಲಾ ಆಗಿದ್ದರು. ಅವರ ಜೊತೆಗೆ ಮೂವರು ಬೇರೆ ಬೇರೆ ದೇಶದ ಗಗನಯಾತ್ರಿಗಳೂ ಇದ್ದಾರೆ.

ನಿನ್ನೆ ಮಧ್ಯಾಹ್ನ 12.30 ಕ್ಕೆ ಆಕ್ಸಿಯಂ ಮಿಷನ್ 4 ನೌಕೆ ಯಶಸ್ವಿಯಾಗಿ ಉಡಾವಣೆಗೊಂಡಿತ್ತು. ಸತತ 28 ಗಂಟೆಗಳ ಯಾತ್ರೆಯ ಬಳಿಕ ಇಂದು ಸಂಜೆ 4 ಗಂಟೆಗೆ ಯಶಸ್ವಿಯಾಗಿ ನೌಕೆ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಆಗಿದೆ.

41 ವರ್ಷಗಳ ಬಳಿಕ ಭಾರತೀಯರೊಬ್ಬರು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಈ ಐತಿಹಾಸಿಕ ಕ್ಷಣ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗಿದೆ. ನಾಲ್ವರು ಗಗನಯಾತ್ರಿಗಳು ಒಟ್ಟು 14 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಲಿದ್ದಾರೆ.  ಶುಕ್ಲಾ ಬಾಹ್ಯಾಕಾಶದಲ್ಲಿ ಆಹಾರ ಮತ್ತು ಪೌಷ್ಠಿಕತೆ ಕುರಿತು ಅಧ್ಯಯನ ನಡೆಸಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೃತಕ ಫುಡ್‌ ಕಲರ್‌ ಬೆನ್ನಲ್ಲೇ ಕೆಲ ಔಷಧಗಳು, ಸೌಂದರ್ಯವರ್ಧಕಗಳ ಬಳಕೆಗೆ ನಿಷೇಧ ಹೇರಿದ ರಾಜ್ಯ ಸರ್ಕಾರ