Select Your Language

Notifications

webdunia
webdunia
webdunia
webdunia

Axiom Mission 4: 41 ವರ್ಷದ ಬಳಿಕ ಭಾರತೀಯ ಶುಭಾಂಶು ಶುಕ್ಲಾ ಗಗನಯಾತ್ರಿ ಬಾಹ್ಯಾಕಾಶಕ್ಕೆ

Shubanshu Shukla

Krishnaveni K

ಫ್ಲೋರಿಡಾ , ಬುಧವಾರ, 25 ಜೂನ್ 2025 (12:48 IST)
Photo Credit: X
ಫ್ಲೋರಿಡಾ: ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದ್ದಾರೆ. ಶುಭಾಂಶು ಸೇರಿದಂತೆ ನಾಲ್ವರನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದರೊಂದಿಗೆ ಆಕ್ಸಿಯಮ್ ಮಿಷನ್ 4 ಉಡಾವಣೆ ಯಶಸ್ವಿಗೊಂಡಿದೆ.

ಅಮೆರಿಕಾ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗಿನ ಜಾವ 2.31 ಕ್ಕೆ ನಾಲ್ವರನ್ನು ಹೊತ್ತ ರಾಕೆಟ್ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದೆ. ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎ ನಿಂದ ಮಿಷನ್ ಲಾಂಚ್ ಆಗಿದೆ.

ಈ ನೌಕೆ  ಅಮೆರಿಕಾ ಕಾಲಮಾನ ಪ್ರಕಾರ ನಾಳೆ ಬೆಳಿಗ್ಗೆ 7 ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30 ಕ್ಕೆ) ಬಾಹ್ಯಾಕಾಶ ಕೇಂದ್ರಕ್ಕೆ ಡಾಕಿಂಗ್ ಆಗಲಿದೆ. ರಾಕೇಶ್ ಶರ್ಮಾ ನಂತರ ಭಾರತೀಯರೊಬ್ಬರು ಬಾಹ್ಯಾಕಾಶದತ್ತ ಪಯಣಿಸಿರುವುದು ಇದೇ ಮೊದಲು. 1984 ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತದ ಮೊದಲ ಗಗನಯಾತ್ರಿಯಾಗಿದ್ದರು.

ಭಾರತ ಕೂಡಾ ಮುಂದಿನ ದಿನಗಳಲ್ಲಿ ಬಾಹ್ಯಾಕಾಶಕ್ಕೆ ತನ್ನ ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ಈ ಹಿನ್ನಲೆಯಲ್ಲಿ ಇದೀಗ ನಾಸಾ ಮತ್ತು ಇಸ್ರೋ ಸಹಯೋಗದೊಂದಿಗೆ ಆಕ್ಸಿಯಮ್ 4 ಮಿಷನ್ ನಲ್ಲಿ ಭಾರತೀಯ ಗಗನಯಾತ್ರಿ ತೆರಳಿರುವುದು ಮುಂದಿನ ದಿನಗಳಲ್ಲಿ ಭಾರತದ ಗಗನಯಾತ್ರೆ ಕನಸು ನನಸಾಗಿಸಲು ಮುಖ್ಯವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾನಾ ವೇಷ ತೊಟ್ಟು ಓಡಾಡಿದ್ದ ಪ್ರಧಾನಿ ಮೋದಿ: ಆ ಪುಸ್ತಕದಲ್ಲಿ ಎಲ್ಲಾ ಮಾಹಿತಿ