Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಮುಂದಿನ ಪ್ರಧಾನಿ ಶೆಹಬಾಜ್ ಷರೀಫ್?

Shehbaz Sharif Pakistan Bilawal Bhutto pakistan ಪಾಕಿಸ್ತಾನ ಶೆಹಬಾಜ್ ಷರೀಫ್ ಪ್ರಧಾನಿ
bengaluru , ಭಾನುವಾರ, 10 ಏಪ್ರಿಲ್ 2022 (14:07 IST)

ವಿಶ್ವಾಸಮತ ಸಾಬೀತುಪಡಿಸುವಲ್ಲಿ ಇಮ್ರಾನ್ ಖಾನ್ ವಿಫಲರಾದ ಬೆನ್ನಲ್ಲೇ ಮುಂದಿನ ಪ್ರಧಾನಿ ಹುದ್ದೆಯನ್ನು ಪ್ರತಿಪಕ್ಷ ನಾಯಕ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖಂಡ ಶೆಹಬಾಜ್ ಷರೀಫ್ ಮುಂದಿನ ಪ್ರಧಾನಿ ಎಂದು ಹೇಳಲಾಗುತ್ತಿದೆ.

ಇಮ್ರಾನ್ ಖಾನ್ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗುವ ಮೂಲಕ ಸರಕಾರ ಪತನಗೊಂಡಿತು. ಇದರ ಬೆನ್ನಲ್ಲೇ ಟ್ವಿಟರ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಕಠಿಣ ಪರಿಸ್ಥಿತಿಯಿಂದ ಪಾಕಿಸ್ತಾನ ಕೊನೆಗೂ ಹೊರಗೆ ಬಂದಿದೆ. ಇಮ್ರಾನ್ ಖಾನ್ ವಿರುದ್ಧ ನಾವು ಯಾವುದೇ ದ್ವೇಷಪೂರಿತ ತನಿಖೆ ಮಾಡುವುದಿಲ್ಲ. ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.

ನಾವು ಯಾರನ್ನೂ ದ್ವೇಷಿಸುವುದಿಲ್ಲ. ಯಾರನ್ನೂ ಜೈಲಿಗೆ ಹಾಕುವುದಿಲ್ಲ. ಯಾರಿಗೂ ಅನ್ಯಾಯ ಮಾಡುವುದಿಲ್ಲ. ಕಾನೂನು ತನ್ನ ಪ್ರಕ್ರಿಯೆ ಸಹಜವಾಗಿ ಮಾಡುತ್ತದೆ ಎಂದು ಶೆಹಬಾಜ್ ಸ್ಪಷ್ಟಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ಸಂಕಷ್ಟ; ಮಕ್ಕಳಿಗೆ ಬೆಂಕಿಹಚ್ಚಿದ ತಾಯಿ!