Publish Date: Thu, 11 Oct 2018 (13:19 IST)
Updated Date: Thu, 11 Oct 2018 (13:21 IST)
ಉಗಾಂಡ : ಉಗಾಂಡದಲ್ಲಿ ಆಕ್ಸ್‌ಫರ್ಡ್ ವಿದ್ಯಾರ್ಥಿನಿಯೊಬ್ಬಳು ವರನಿಲ್ಲದೇ ತನ್ನನ್ನು ತಾನೇ ವಿವಾಹವಾದ ಆಶ್ಚರ್ಯಕರ ಘಟನೆ ನಡೆದಿದೆ.
32 ವರ್ಷದ ಲುಲು ಜೆಮಿಮಾ ತನ್ನನ್ನು ತಾನೇ ಮದುವೆಯಾದ ವಧು. ಈಕೆಗೆ ಮದುವೆ ಇಷ್ಟವಿಲ್ಲದಿದ್ದರೂ ಕೂಡ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದಾರೆ. ಇದರಿಂದ ಬೇಸರಗೊಂಡ ಆಕೆ ಮನೆಯವರ ಸಮಾಧಾನಕ್ಕಾಗಿ ಆಗಸ್ಟ್ 27 ರಂದು ಉಗಾಂಡಾದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ವರನಿಲ್ಲದೇ ಮದುವೆ ಮಾಡಿಕೊಂಡಿದ್ದಾಳೆ.
ಮದುವೆಗೆ ಲುಲು ಜೆಮಿಯಾ ಕೇವಲ 2.62 ಡಾಲರ್(194.97 ರೂ.) ಖರ್ಚು ಮಾಡಿದ್ದಾಳಂತೆ. ಅಲ್ಲದೇ ಮದುವೆಗೆ ಬಂದವರು ತಮ್ಮ ಖರ್ಚನ್ನು ತಾವೇ ನೀಡಿದ್ದಾರೆ ಎಂದು ಜೆಮಿಯಾ ಹೇಳಿದ್ದಾರೆ. ಒಟ್ಟಿನಲ್ಲಿ ವರನಿಲ್ಲದೇ ಮದುವೆಯಾಗಬಹುದು ಎಂದು ತೋರಿಸಿಕೊಟ್ಟ ಕೀರ್ತಿ ಈಕೆಗೆ ಸಲ್ಲುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.