Select Your Language

Notifications

webdunia
webdunia
webdunia
webdunia

ಜಗತ್ತಿನ ಅತೀ ದುಬಾರಿ ಚಪ್ಪಲಿ! ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ಜಗತ್ತಿನ ಅತೀ ದುಬಾರಿ ಚಪ್ಪಲಿ! ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
ದುಬೈ , ಶನಿವಾರ, 29 ಸೆಪ್ಟಂಬರ್ 2018 (09:21 IST)
ದುಬೈ: ನೀವು ತೊಡುವ ಚಪ್ಪಲಿ ಬೆಲೆ ಎಷ್ಟು? ಹೆಚ್ಚೆಂದರೆ ಎಷ್ಟೋ ಸಾವಿರಗಳಷ್ಟು ಇರಬಹುದು. ಆದರೆ ಇಲ್ಲೊಂದು ಚಪ್ಪಲಿಯ ಬೆಲೆ ಕೇಳದ್ರೆ ಶಾಕ್ ಆಗ್ತೀರಿ.

ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿಯೊಂದು ದುಬೈನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದರ ಬೆಲೆ ಬರೋಬ್ಬರಿ ಅಮೆರಿಕನ್ ಡಾಲರ್ ಲೆಕ್ಕದಲ್ಲಿ 17 ಮಿಲಿಯನ್ ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಭರ್ಜರಿ 123 ಕೋಟಿ ರೂ.!!

ಇದು ಅಂತಿಂಥಾ ಚಪ್ಪಲಿಯಲ್ಲ. ಮಾಮೂಲಿ ಚರ್ಮದ ಚಪ್ಪಲಿಯಂತೂ ಅಲ್ಲವೇ ಅಲ್ಲ. ಸಂಪೂರ್ಣ ಚಿನ್ನ, ವಜ್ರ ಲೇಪಿತ ಚಪ್ಪಲಿ. ಯುಎಇ ಮೂಲದ ಜಡಾ ಎನ್ನುವ ಕಂಪನಿ, ಪ್ಯಾಷನ್ ಜ್ಯುವಲ್ಲರ್ಸ್ ಸಹಯೋಗದೊಂದಿಗೆ ಈ ದುಬಾರಿ ಚಪ್ಪಲಿ ನಿರ್ಮಿಸಿದೆ. ದುಬೈಯ ಐಷರಾಮಿ ಹೋಟೆಲ್ ನಲ್ಲಿ ಈ ಚಪ್ಪಲಿಯನ್ನು ಪ್ರದರ್ಶನಕ್ಕಿಡಲಾಗಿದ್ದು, ತನ್ನನ್ನು ಕೊಳ್ಳುವ ಗ್ರಾಹಕನಿಗಾಗಿ ಕಾದು ಕುಳಿತಿದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರಾಫೆಲ್ ಡೀಲ್ ವಿವಾದಕ್ಕೆ ನಟ ಕಮಲ್ ಹಾಸನ್ ಎಂಟ್ರಿ