ಇಸ್ಲಾಮಾಬಾದ್: ಪಾಕಿಸ್ತಾನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಆರಿಫ್ ಅಲ್ವಿ ಅವರಿಗೆ ಭಾರತದೊಂದಿಗೆ ಅವಿನಾಭಾವ ಸಂಬಂಧವೊಂದು ಇದೆ ಎನ್ನುವುದು ಪತ್ತೆಯಾಗಿದೆ.
ಪಾಕಿಸ್ತಾನದ ನೂತನ ಅಧ್ಯಕ್ಷ ಡಾ. ಆರಿಫ್ ತಂದೆ ಡಾ. ಇಲಾಹಿ ಅಲ್ವಿ ದಂತ ವೈದ್ಯರಾಗಿದ್ದರಂತೆ. ಇವರು ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ದಂತ ವೈದ್ಯರಾಗಿದ್ದರಂತೆ!
ಹಾಗಂತ ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷ ತನ್ನ ವೆಬ್ ಸೈಟ್ ನಲ್ಲಿ ಉಲ್ಲೇಖಿಸಿದೆ. ಈಗಲೂ ಅಲ್ವಿ ಬಳಿ ನೆಹರೂ ಮತ್ತು ಅವರ ತಂದೆ ಇಲಾಹಿ ಬರೆದಿದ್ದ ಪತ್ರಗಳಿವೆಯಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.