Select Your Language

Notifications

webdunia
webdunia
webdunia
webdunia

24 ದೇಶಗಳ ವಿಮಾನಗಳಿಗೆ ನಿರ್ಬಂಧ!

24 ದೇಶಗಳ ವಿಮಾನಗಳಿಗೆ ನಿರ್ಬಂಧ!
ಓಮನ್ , ಶುಕ್ರವಾರ, 9 ಜುಲೈ 2021 (22:26 IST)
ಓಮನ್ :  ಒಂದೂವರೆ ವರ್ಷದಿಂದ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಎಲ್ಲಾ ದೇಶಗಳ ನಾಯಕರ ನಿದ್ದೆ ಕೆಡಿಸಿದೆ ಎಂದರೆ ತಪ್ಪಾಗಲಾರದು. ಅನೇಕ ರಾಷ್ಟ್ರಗಳು ಅನೇಕ ತರಹದ ಮಾರ್ಗಗಳನ್ನು ಹುಡುಕುತ್ತಲೇ ಇವೆ. ಈ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಹೊಸ ಕೇಸುಗಳಾಗದಂತೆ ಹತೋಟಿಗೆ ತರಲು ತಮ್ಮ ದೇಶಕ್ಕೆ ಬೇರೆ ದೇಶದಿಂದ ಬರುವಂತಹ ಜನರನ್ನು ಮತ್ತು ಪ್ರವಾಸಿಗರನ್ನು ತಡೆಯಲು ವಿಮಾನಗಳ ಮೇಲೆ ನಿರ್ಬಂಧವನ್ನು ಹೇರುತ್ತಿರುವುದು ಸಾಮಾನ್ಯವಾಗಿದೆ. ಈಗ ಇಂತಹದ್ದೇ ಒಂದು ಪ್ರಯತ್ನದಲ್ಲಿ ಗಲ್ಫ್ ರಾಷ್ಟ್ರವಾದ ಓಮನ್ ಇನ್ನೊಂದು ಹೆಜ್ಜೆ ಮುಂದೆ ಇಟ್ಟು 24 ರಾಷ್ಟ್ರಗಳ ವಿಮಾನಗಳ ಮೇಲೆ ನಿರ್ಬಂಧವನ್ನು ಹೇರಿದೆ.

ಓಮನ್ ರಾಷ್ಟ್ರವು ಭಾರತ, ಪಾಕಿಸ್ತಾನ ಹಾಗು ಬಾಂಗ್ಲಾದೇಶ ಸೇರಿದಂತೆ 24 ಇತರೆ ದೇಶಗಳಿಂದ ಪ್ರಯಾಣಿಕರನ್ನು ಹೊತ್ತು ತರುವಂತಹ ವಿಮಾನಗಳ ಮೇಲೆ ನಿರ್ಬಂಧವನ್ನು ಹೇರಿದೆ. ಮುಂದಿನ ಆದೇಶದ ವರೆಗೆ ವಿಮಾನಗಳ ಮೇಲಿನ ನಿರ್ಬಂಧವು ಹೀಗೆ ಮುಂದುವರೆಯುತ್ತದೆ ಎಂದು ಓಮನ್ ಸುಲ್ತಾನೇಟ್ ಅಫೀಶಿಯಲ್ ಟ್ವಿಟ್ಟರ್ ಅಕೌಂಟ್ ನಲ್ಲಿ ತಿಳಿಸಿದ್ದಾರೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಹತೋಟಿಗೆ ತರುವ ಒಂದು ಉದ್ದೇಶದಿಂದ ಬೇರೆ ಬೇರೆ ದೇಶಗಳಿಂದ ಬರುವ ವಿಮಾನಗಳ ಮೇಲೆ ನಿರ್ಬಂಧವನ್ನು ಹೇರಲಾಗಿದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ.
webdunia

ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳ ಜೊತೆಗೆ ಇನ್ನೂ ಹಲವು ರಾಷ್ಟ್ರಗಳಾದಂತಹ ಯುಕೆ, ಟುನೀಸಿಯಾ, ಲೆಬೆನಾನ್, ಇರಾನ್, ಇರಾಕ್, ಲಿಬಿಯಾ, ಬ್ರುನೀ, ಸಿಂಗಾಪೂರ್, ಇಂಡೋನೇಷ್ಯಾ, ಫಿಲಿಫೈನ್ಸ್, ಇಥಿಯೋಪಿಯ, ಸುಡಾನ್, ತಂಜಾನಿಯಾ, ಸೌತ್ ಆಫ್ರಿಕಾ, ಸೆರ್ರಾ ಲಿಯೊನಿ, ನೈಜೀರಿಯಾ, ಗುಯಾನಾ, ಕೊಲಂಬಿಯಾ, ಅರ್ಜೆಂಟಿನಾ ಮತ್ತು ಬ್ರೆಜಿಲ್ ಗಳಿಂದಲೂ ಬರುವಂತಹ ವಿಮಾನಗಳ ಮೇಲೆ ನಿರ್ಬಂಧವನ್ನು ಹೇರಲಾಗಿದೆ.
ಇಲ್ಲಿ ಹಲವಾರು ರಾಷ್ಟ್ರಗಳಿಂದ ಬರುವಂತಹ ವಿಮಾನಗಳ ಮೇಲೆ ಏಪ್ರಿಲ್ 24 ರಿಂದಲೇ ನಿರ್ಬಂಧವನ್ನು ಹೇರಲಾಗಿತ್ತು. ಈ ಎಲ್ಲಾ ರಾಷ್ಟ್ರಗಳಿಂದ ಬಹಳಷ್ಟು ಜನರು ಓಮನ್ ಗೆ ಕೆಲಸ ಮಾಡಲು ಮತ್ತು ಅನೇಕ ಪ್ರವಾಸಿಗರು ಈ ರಾಷ್ಟ್ರಗಳಿಂದ ಬರುವುದು ಗಮನಿಸಬೇಕಾದಂತಹ ವಿಷಯವಾಗಿದೆ ಮತ್ತು ಅನೇಕರು ಹೊರ ರಾಷ್ಟ್ರಗಳಿಂದ ಓಮನ್ ಗೆ ಬರುವುದರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿದ್ದು ಮುಂಜಾಗೃತಾ ಕ್ರಮವಾಗಿ ನಿರ್ಬಂಧವನ್ನು ಹೇರಲಾಗಿದೆ.
ಬುಧವಾರ ಒಂದೇ ದಿನದಲ್ಲಿ ಓಮನ್ ನಲ್ಲಿ ಸುಮಾರು 1675 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ ದೇಶದಲ್ಲಿ ಒಟ್ಟು 2,80,235 ಕೊರೊನಾ ಪ್ರಕರಣಗಳಾಗಿವೆ. ಇದುವರೆಗೂ ದೇಶದಲ್ಲಿ ಸುಮಾರು 3356 ಕೊರೊನಾ ಸಂಬಂಧಿತ ಸಾವುಗಳು ಆಗಿದ್ದು, ಓಮನ್ ರಾಷ್ಟ್ರವು ಸಹ ಬೇರೆ ಇತರೆ ರಾಷ್ಟ್ರಗಳಂತೆ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಅನೇಕ ತರಹದ ಕ್ರಮಗಳನ್ನು ತೆಗೆದುಕೊಂಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಮಗನಿಗೆ ಹೆಸರಿಟ್ಟ ಕರೀನಾ ಕಪೂರ್-ಸೈಫ್ ಅಲಿ ಖಾನ್ ದಂಪತಿ..!