Select Your Language

Notifications

webdunia
webdunia
webdunia
webdunia

ಆರ್ ಎಸ್ಎಸ್ ಪ್ರಕಾರ ಮಹಿಳೆಯರು ಮನೆಗೆ ಮಾತ್ರ ಸೀಮಿತ: ರಾಹುಲ್ ಗಾಂಧಿ

Rahul Gandhi

Krishnaveni K

ಟೆಕ್ಸಾಸ್ , ಮಂಗಳವಾರ, 10 ಸೆಪ್ಟಂಬರ್ 2024 (11:06 IST)
Photo Credit: X
ಟೆಕ್ಸಾಸ್: ಮಹಿಳೆಯರು ಮನೆಗೆ ಮಾತ್ರ ಸೀಮಿತ ಎಂಬುದು ಆರ್ ಎಸ್ಎಸ್ ಮತ್ತು ಬಿಜೆಪಿಯ ಸಿದ್ಧಾಂತವಾಗಿದೆ. ಆದರೆ ಕಾಂಗ್ರೆಸ್ ಮಹಿಳೆಯರಿಗೂ ಸಮಾನತೆ ನೀಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಟೆಕ್ಸಾಸ್ ವಿವಿಯಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂವಾದದಲ್ಲಿ ಅವರು ಚೀನಾವನ್ನು ಹೊಗಳಿ, ಭಾರತದ ಸಮಸ್ಯೆಯನ್ನು ಆಡಿಕೊಂಡಿದ್ದು ಎಲ್ಲರ ಟೀಕೆಗೆ ಗುರಿಯಾಗಿದೆ.

ಭಾರತದಲ್ಲಿ ಈಗಲೂ ಪುರುಷರಿಗೆ ತಾವೇ ಮೇಲು ಎಂಬ ಭಾವನೆಯಿದೆ. ಅವರಲ್ಲಿ ಮಹಿಳೆಯರೂ ಸಮಾನರು ಎಂಬ ಮನಸ್ಥಿತಿ ಮೂಡಬೇಕಿದೆ. ಮಹಿಳೆಯರ ಕುರಿತಾದ ಭಾವನೆ, ನಡವಳಿಕೆ ಕೂಡಾಆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟವಾಗಿದೆ. ಬಿಜೆಪಿ ಮತ್ತು ಆರ್ ಎಸ್ಎಸ್ ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗಬೇಕು, ಅಡುಗೆ ಮಾಡುತ್ತಾ ಕಾಲ ಕಳೆಯಬೇಕು, ಹೆಚ್ಚು ಮಾತನಾಡಬಾರದು ಎಂದು ಭಾವಿಸಿದ್ದಾರೆ. ಆರ್ ಎಸ್ ಎಸ್ ಭಾರತವನ್ನು ಒಂದು ಪರಿಕಲ್ಪನೆ ಎಂದು ನಂಬುತ್ತದೆ. ಆದರೆ ಕಾಂಗ್ರೆಸ್ ಭಾರತವನ್ನು ಹಲವು ವೈವಿದ್ಯಮಯ ಪರಿಕಲ್ಪನೆ ಎಂದು ಭಾವಿಸುತ್ತದೆ ಎಂದಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳ ಕುರಿತು ಭಯವೆಲ್ಲಾ ಹೊರಟು ಹೋಯಿತು. ಇದು ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿ ಸಾಧನೆಯಲ್ಲ.  ಬದಲಾಗಿ ಸಂವಿಧಾನದ ಮೇಲಿನ ದಾಳಿಯನ್ನು ಒಪ್ಪುವುದಿಲ್ಲ ಎಂದು ಸಂಕಲ್ಪ ತೊಟ್ಟಿದ್ದ ಭಾರತೀಯರ ಸಂಕಲ್ಪದ ಸಾಧನೆಯಾಗಿತ್ತು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದಲ್ಲಿ ನಿಂತು ಭಾರತವನ್ನು ತೆಗಳಿ ಚೀನಾ ಹೊಗಳಿದ ರಾಹುಲ್ ಗಾಂಧಿ