ಟೆಕ್ಸಾಸ್: ಅಮೆರಿಕಾ ಪ್ರವಾಸ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತವನ್ನು ತೆಗಳಿ ಚೀನಾವನ್ನು ಹೊಗಳಿದ್ದಾರೆ. ರಾಹುಲ್ ಹೇಳಿಕೆ ಈಗ ಭಾರೀ ಟೀಕೆಗೆ ಒಳಗಾಗಿದೆ.
ಅಮೆರಿಕಾ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೆಕ್ಸಾಸ್ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಅವರು ನಿರುದ್ಯೋಗ, ಉದ್ಯೋಗ ಸೃಷ್ಟಿ ವಿಚಾರದಲ್ಲಿ ಭಾರತವನ್ನು ತೆಗಳಿ, ಭಾರತದ ಎದುರಾಳಿ ರಾಷ್ಟ್ರ ಚೀನಾವನ್ನು ಹಾಡಿಹೊಗಳಿದ್ದಾರೆ.
ಭಾರತೀಯರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜಾಗತಿಕವಾಗಿ ಉತ್ಪಾದನೆಯಲ್ಲಿ ಚೀನಾ ಮುಂಚೂಣಿಯಲ್ಲಿದ್ದು, ಈ ಕಾರಣಕ್ಕೆ ಚೀನಾದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ. ಆದರೆ ಭಾರತ, ಅಮೆರಿಕಾದಲ್ಲಿ ಉತ್ಪಾದನೆ ಕುಸಿತವಾಗುತ್ತಿದ್ದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.
ಭಾರತದಲ್ಲಿ ಕೌಶಲ್ಯಕತೆಗೆ ಕೊರತೆಯಿಲ್ಲ. ಒಂದು ವೇಳೆ ಉತ್ಪಾದನೆಯೊಂದಿಗೆ ಮುಂದುವರಿದರೆ ನಾವೂ ಚೀನಾ ಜೊತೆ ಸ್ಪರ್ಧೆ ನಡೆಸಬಹುದು. ಭಾರತದಲ್ಲಿ ಕೌಶಲ್ಯ ಶಿಕ್ಷಣದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಕೊರತೆಗಳ ಪಟ್ಟಿಯನ್ನೇ ಹೇಳಿದ್ದಾರೆ. ವಿಪಕ್ಷ ನಾಯಕನ ಹೇಳಿಕೆ ಬಿಜೆಪಿ ತೀವ್ರವಾಗಿ ಟೀಕೆ ಮಾಡಿದೆ. ರಾಹುಲ್ ಗೆ ವಿದೇಶಕ್ಕೆ ಹೋಗಿ ಭಾರತದ ಮಾನ ಕಳೆಯುವುದು ಅಭ್ಯಾಅಸವಾಗಿದೆ ಎಂದು ಟೀಕೆ ಮಾಡಿದೆ. ಈ ಹಿಂದೆಯೂ ಅಮೆರಿಕಾ ಪ್ರವಾಸದಲ್ಲಿ ರಾಹುಲ್ ಭಾರತವನ್ನು ಟೀಕಿಸಿ ವಿವಾದಕ್ಕೊಳಗಾಗಿದ್ದರು.