Select Your Language

Notifications

webdunia
webdunia
webdunia
webdunia

ಪುಟಿನ್ ನೇರ ಎಚ್ಚರಿಕೆ!?

ಪುಟಿನ್ ನೇರ ಎಚ್ಚರಿಕೆ!?
ನವದೆಹಲಿ , ಗುರುವಾರ, 24 ಫೆಬ್ರವರಿ 2022 (13:49 IST)
ಮಾಸ್ಕೋ : ರಷ್ಯಾ – ಉಕ್ರೇನ್ ಮೇಲೆ ಯುದ್ಧ ಘೋಷಿಸುತ್ತಿದ್ದಂತೆ ಮಾಸ್ಕೋ ಮತ್ತು ಉಕ್ರೇನ್ ನಡುವಿನ ರಾಜತಾಂತ್ರಿಕ ಸಂಬಂಧ ಮುರಿದು ಬಿದ್ದಿದೆ.

ಇತ್ತ ರಷ್ಯಾ- ಉಕ್ರೇನ್ ಯುದ್ಧ ವಿಚಾರವಾಗಿ ಇತರ ರಾಷ್ಟ್ರಗಳು ಮೂಗುತೂರಿಸಬೇಡಿ ಎಂದು ಪುಟಿನ್ ನೇರವಾಗಿ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ದಾಳಿ ಆರಂಭಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಉಕ್ರೇನ್ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ. ಈ ವಿಚಾರದಲ್ಲಿ ಯಾವುದೇ ರಾಷ್ಟ್ರಗಳು ಮೂಗುತೂರಿಸದಂತೆ ಇತರ ರಾಷ್ಟ್ರಗಳಿಗೆ ವಾಡ್ಲಿಮಿರ್ ಪುಟೀನ್ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ಇತ್ತೀಚಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದು, ಹಸ್ತಕ್ಷೇಪ ಮಾಡುವ ಇತರ ರಾಷ್ಟ್ರಗಳು ಪರಿಣಾಮ ಎದುರಿಸಬೇಕಾದಿತು. ಈ ಹಿಂದೆ ಎಂದೂ ನೋಡಿರದ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪುಟೀನ್ ವಾರ್ನಿಂಗ್ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಆನ್‍ಲೈನ್‍ನಲ್ಲಿ ಕಾಣಿಕೆ ?