Select Your Language

Notifications

webdunia
webdunia
webdunia
webdunia

ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಶಾತಿ ಮಂತ್ರ

ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಶಾತಿ ಮಂತ್ರ
ನವದೆಹಲಿ , ಸೋಮವಾರ, 4 ಸೆಪ್ಟಂಬರ್ 2017 (10:04 IST)
ನವದೆಹಲಿ: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ 9 ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಶಾಂತಿ ಮಂತ್ರ ಪಠಿಸಿದ್ದಾರೆ.

 
ಬ್ರಿಕ್ಸ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಮೋದಿ, ಬ್ರಿಕ್ಸ್ ದೇಶಗಳ ನಡುವೆ ಪರಸ್ಪರ ಸಹಕಾರ, ಶಾಂತಿ ಅತ್ಯಗತ್ಯ. ಭಯೋತ್ಪಾದನೆ ನಿಗ್ರಹ ನಮ್ಮ ಮುಖ್ಯ ಅಜೆಂಡವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಯುವ ಸಮೂಹವೇ ನಮ್ಮ ಶಕ್ತಿ ಎಂದಿರುವ ಪ್ರಧಾನಿ ಮೋದಿ, ಡಿಜಿಟಲ್ ಕ್ರಾಂತಿಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಯಾವಾಗಲೂ ಹಿಂದಿಯಲ್ಲಿ ನಿರ್ಗಳವಾಗಿ ಮಾತನಾಡುವ ಮೋದಿ ಬ್ರಿಕ್ಸ್ ಸಮ್ಮೇಳನದಲ್ಲಿ ಆಂಗ್ಲ ಭಾಷೆಯ ಲಿಖಿತ ಭಾಷಣ ಓದಿದರು.

ಡೋಕ್ಲಾಂ ವಿವಾದ ಮುಗಿದ ಬೆನ್ನಲ್ಲೇ ಚೀನಾಗೆ ಭೇಟಿ ಕೊಟ್ಟಿರುವ ಭಾರತೀಯ ಪ್ರಧಾನಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತ್ಮೀಯ ಸ್ವಾಗತ ನೀಡಿದರು. ನಂತರ ಬ್ರಿಕ್ಸ್ ನಾಯಕರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿದರು.

ಇದನ್ನೂ ಓದಿ.. ಗುಡ್ ನ್ಯೂಸ್ ಕೊಟ್ಟ ಸೈನಾ ನೆಹ್ವಾಲ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಕಾಂಗ್ರೆಸ್ ನ್ನು ಜನ ಕಸದ ಬುಟ್ಟಿಗೆ ಹಾಕ್ತಾರೆ’