Publish Date: Mon, 04 Sep 2017 (09:01 IST)
Updated Date: Mon, 04 Sep 2017 (09:04 IST)
ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಆಯ್ಕೆಯಾಗಿರುವ ಪ್ರಕಾಶ್ ಜಾವೇಡ್ಕರ್ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲು ಬೆಂಗಳೂರಿಗೆ ಆಗಮಿಸಿದ್ದಾರೆ.
ನಿನ್ನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಮೊದಲು ಮಾಡಿದ್ದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಕೆಲಸ. ಈ ವೇಳೆ ಮಾತನಾಡಿದ ಅವರು ‘ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್ ನ್ನು ಕಸದ ಬುಟ್ಟಿಗೆ ಎಸೀತಾರೆ’ ಎಂದು ಟೀಕಿಸಿದ್ದಾರೆ.
ಇಂತಹ ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಕ್ಷಮಿಸೋಲ್ಲ ಎಂದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಣತಿಯಂತೆ ಸರಣಿ ಸಭೆ ನಡೆಸಲಿರುವ ಅವರು ಪಕ್ಷವನ್ನು ಚುನಾವಣೆಗೆ ಹೇಗೆ ಸಂಘಟಿಸಬೇಕೆಂದು ಚರ್ಚೆ ನಡೆಸಲಿದ್ದಾರೆ.