Publish Date: Sun, 03 Sep 2017 (08:29 IST)
Updated Date: Sun, 03 Sep 2017 (08:31 IST)
ನವದೆಹಲಿ: ಪ್ರಧಾನಿ ಮೋದಿಗೆ ಎದುರುತ್ತರ ಕೊಡುವವರು, ಮರು ಪ್ರಶ್ನೆ ಕೇಳುವವರನ್ನು ಕಂಡರೆ ಆಗಲ್ಲ. ಸರ್ವಾಧಿಕಾರಿಯಂತೆ ಆಡುತ್ತಾರೆ ಎಂದು ಬಿಜೆಪಿ ಸಂಸದ ನಾನಾ ಪಟೋಲೆ ಆರೋಪಿಸಿದ್ದಾರೆ.
ಅವರಿಗೆ ಪ್ರಶ್ನೆಗಳನ್ನು ಕೇಳಿದರೆ ಸಹಿಸಲ್ಲ. ಹಿಂದುಳಿದ ವರ್ಗದವರು ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ನಾನು ಪ್ರಶ್ನಿಸಲು ಮುಂದಾದಾಗ ಅವರು ನನ್ನ ಬಾಯಿ ಮುಚ್ಚಿಸಿದರು ಎಂದು ಸಂಸದ ಪಟೋಲೆ ಹೇಳಿಕೊಂಡಿದ್ದಾರೆ.
ಸಂಸದರ ಸಭೆಯಲ್ಲಿ ಪ್ರಶ್ನೆ ಕೇಳಲು ಮುಂದಾದಾಗ ನಮಗೇ ಯಾವುದೋ ಯೋಜನೆಗಳ ಹೆಸರು ಹೇಳಿ ಇದು ಗೊತ್ತಾ? ಅದು ಗೊತ್ತಾ? ಎಂದು ಬಾಯಿ ಮುಚ್ಚಿಸಿದರು ಎಂದು ಪಟೋಲೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.