ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಲೀ.ಗೆ 30ರೂ. ಹೆಚ್ಚಿಸಿದೆ.
ಇಂದಿನಿಂದ ಜಾರಿಯಾಗಿರುವ ಈ ದರವು ಇಸ್ಲಾಮಾಬಾದ್ನಲ್ಲಿ ಒಂದು ಲೀ.ಗೆ ಪೆಟ್ರೋಲ್ ಬೆಲೆ 129.86 ರೂ. ಹಾಗೂ ಡಿಸೇಲ್ ಬೆಲೆ 178.15ರೂ. ಏರಿಕೆ ಆಗಿದೆ.
ಇದರ ಜೊತೆಗೆ ಸೀಮೆಎಣ್ಣೆ ಕೂಡ 30 ರೂ. ಏರಿಕೆಯಾಗಿದ್ದು, ಲೀಟರ್ಗೆ 155.56 ರೂ.ಗೆ ಹೆಚ್ಚಳವಾಗಿದೆ. ಈ ಬಗ್ಗೆ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಲೀಟರ್ಗೆ 30 ರೂ.ಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದರು. ಈ ಹೆಚ್ಚಳವು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದರು.
ಸರ್ಕಾರಕ್ಕೆ ಬೆಲೆ ಏರಿಕೆ ಬಿಟ್ಟು ಬೇರೆ ದಾರಿಯಿಲ್ಲ. ಹೊಸ ಬೆಲೆಯ ಅಡಿಯಲ್ಲಿ, ನಾವು ಇನ್ನೂ ಡೀಸೆಲ್ ಮೇಲೆ ಲೀಟರ್ಗೆ 56 ರೂ. ನಷ್ಟವನ್ನು ಅನುಭವಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಾರ್ಯಕ್ರಮದ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.