Select Your Language

Notifications

webdunia
webdunia
webdunia
webdunia

ಕಾಶ್ಮೀರ ಸಮಸ್ಯೆ ಬಗೆಹರಿಯದೆ ಭಾರತದೊಂದಿಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದ ಪಾಕ್

ಕಾಶ್ಮೀರ ಸಮಸ್ಯೆ ಬಗೆಹರಿಯದೆ ಭಾರತದೊಂದಿಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದ ಪಾಕ್
ವಾಷಿಂಗ್ಟನ್ , ಶನಿವಾರ, 18 ಜನವರಿ 2020 (06:28 IST)
ವಾಷಿಂಗ್ಟನ್ : ಕಾಶ್ಮೀರ ಸಮಸ್ಯೆ ಬಗೆಹರಿಯದೆ ಭಾರತದೊಂದಿಗೆ ಶಾಂತಿ ಮಾತುಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.



ವಾಷಿಂಗ್ಟನ್ ನಲ್ಲಿ ನಡೆದ ಕಾರ್ಯತಂತ್ರ ಮತ್ತು ಅಂತರಾಷ್ಟ್ರೀಯ ಅಧ್ಯಯನಗಳ ಚಿಂತಕರ ಸಮಾವೇಶದಲ್ಲಿ ಮಾತನಾಡಿದ ಅವರು, ‘ನೆರೆಯ ದೇಶಗಳಲ್ಲಿ ಶಾಂತಿ ನೆಲೆಸಬೇಕೆಂದು ನಮ್ಮ ಸರ್ಕಾರ ಬಯಸುತ್ತದೆ. ಆರ್ಥಿಕ ಸುಧಾರಣೆ ಮತ್ತು ಇತರ ಕ್ಷೇತ್ರಗಳ ಅಭಿವೃದ್ಧಿಗೆ ನಮ್ಮ ದೇಶದ ಅಜೆಂಡಾವನ್ನು ಸಾಧಿಸುವತ್ತ ಗಮನ ಹರಿಸಲು ನಮಗೆ ಶಾಂತಿ ಬೇಕು. ಹಾಗೇಂದು ಭಾರತದೊಂದಿಗೆ ಶಾಂತಿ ಮಾತುಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದು ನಮ್ಮ ಘನತೆ, ಗೌರವಕ್ಕೆ ತಕ್ಕುದಾದುದಲ್ಲ. ಕಾಶ್ಮೀರ ಸಮಸ್ಯೆಯನ್ನು ಭಾರತ ಬಗೆಹರಿಸದಿದ್ದರೆ ಶಾಂತಿ ಮಾತುಕತೆಗೆ ನಾವು ಖಂಡಿತಾ ಸಿದ್ದವಿಲ್ಲ’  ಎಂದು ಖಡಕ್ ಆಗಿ ಹೇಳಿದ್ದಾರೆ.  


Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ ಸೋತವರಿಗೂ ಸಚಿವ ಸ್ಥಾನ ಕೊಡ್ತೇವೆ ; ಬಿಜೆಪಿಯಲ್ಲಿ ತಲ್ಲಣ